ADVERTISEMENT

ಹತ್ತರಲ್ಲಿ ಕಾಣಿಸಿಕೊಳ್ಳದ ರೆಸ್ಟಾ, ನಿಕೊ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಸೆಪಾಂಗ್ (ಪಿಟಿಐ): ಸಹಾರಾ ಫೋರ್ಸ್ ಇಂಡಿಯಾ ತಂಡದ ಇಬ್ಬರೂ ಚಾಲಕರು ಮಲೇಷ್ಯಾ ಗ್ರ್ಯಾಂಡ್ ಪ್ರೀ ಮೋಟಾರ್ ರೇಸ್‌ನ ಪ್ರಧಾನ ಸ್ಪರ್ಧೆಯಲ್ಲಿ ಮೊದಲ ಹತ್ತರಲ್ಲಿ ಸ್ಪರ್ಧೆ ಆರಂಭಿಸುವ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಪಾಲ್ ಡಿ ರೆಸ್ಟಾ ಹಾಗೂ ನಿಕೊ ಹಲ್ಕೆನ್‌ಬರ್ಗ್ ಅವರು ಭಾನುವಾರ ಇಲ್ಲಿನ ರೇಸ್ ಟ್ರ್ಯಾಕ್‌ನಲ್ಲಿ ಕ್ರಮವಾಗಿ 14 ಹಾಗೂ 16ನೆಯವರಾಗಿ ಸ್ಪರ್ಧೆ ಆರಂಭಿಸಲಿದ್ದಾರೆ.

ಮೂರನೇ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಇವರಿಬ್ಬರೂ ಉತ್ತಮ ವೇಗವನ್ನು ಸಾಧಿಸಲು ಆಗಿರಲಿಲ್ಲ. ಆದರೆ ನಿಕೊ (1:37.890) ಅವರಿಗಿಂತ ರೆಸ್ಟಾ (1.37.877) ಈ ಟ್ರ್ಯಾಕ್‌ನಲ್ಲಿ ಚುರುಕಾಗಿ ತಮ್ಮ ಕಾರ್ ಮುನ್ನುಗ್ಗಿಸುವ ಪ್ರಯತ್ನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.