ADVERTISEMENT

ಹರ್ಮಿತ್‌ಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ಪುಣೆ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬಲಗೈ ಮಧ್ಯಮ ವೇಗದ ಬೌಲರ್ ಹರ್ಮಿತ್ ಸಿಂಗ್ ಬನ್ಸಾಲ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಅಧಿಕೃತ ಎಚ್ಚರಿಕೆ ನೀಡುವ ಜೊತೆಗೆ ಛೀಮಾರಿ ಹಾಕಲಾಗಿದೆ.

ಪುಣೆ ವಾರೀಯರ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದ ಸಂದರ್ಭದಲ್ಲಿ ಅವರು ಐಪಿಎಲ್ ನೀತಿ ಸಂಹಿತೆಯ 2.1.8ನೇ ಪರಿಚ್ಛೇದದ ಅಡಿಯಲ್ಲಿ ಮೊದಲ ಹಂತದ ತಪ್ಪು ಮಾಡಿದ್ದಾರೆ ಎಂದು ಐಪಿಎಲ್ ಆಡಳಿತವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಪುಣೆ ವಾರೀಯರ್ಸ್ ತಂಡದವರು ಬ್ಯಾಟಿಂಗ್ ಮಾಡುತ್ತಿದ್ದ 19ನೇ ಓವರ್‌ನಲ್ಲಿ ಹರ್ಮಿತ್ ಅವರು ಮುಂಗೈ ಎತ್ತರದಲ್ಲಿ `ಬೀಮರ್~ ಎಸೆತ ಪ್ರಯೋಗಿಸಿದ್ದರು. ಆಗ ಮನೀಷ್ ಪಾಂಡೆ ಕ್ರೀಸ್‌ನಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.