
ಪ್ರಜಾವಾಣಿ ವಾರ್ತೆಢಾಕಾ (ಐಎಎನ್‌ಎಸ್): ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯವನ್ನು ವಹಿಸಿಕೊಂಡ ದೇಶಗಳಲ್ಲಿ ಒಂದಾಗಿರುವ ಬಾಂಗ್ಲಾದೇಶ ಈ ಸಲ ಕ್ವಾರ್ಟರ್‌ಫೈನಲ್ ಪ್ರವೇಶಿಸಲಿ ಎಂದು ನಾಯಕ ಶಕೀಬ್-ಅಲ್-ಹಸನ್ ಪಡೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಮಾರ್ಚ್ 19ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಮೀರ್‌ಪುರದಲ್ಲಿ ನಡೆಯಲಿರುವ ಕೊನೆಯ ಲೀಗ್ ಪಂದ್ಯಕ್ಕೆ ಗುರುವಾರ ಅಭ್ಯಾಸ ಆರಂಭಿಸಿದ ಬಾಂಗ್ಲಾ ಆಟಗಾರರಿಗೆ ಅಲ್ಲಿನ ಪ್ರವಾಸೋದ್ಯಮ ಮಂಡಳಿ ಹಾಗೂ ವಿವಿಧ ಕಂಪೆನಿಗಳ ಪ್ರಾಯೋಜಕರು ಕೂಡಾ ಶುಭಾಶಯಗಳನ್ನು ಕೋರಿದರು. ಇಂಗ್ಲೆಂಡ್ ತಂಡವನ್ನು ಮಣಿಸಿ ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಬಾಂಗ್ಲಾ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರಬಲ ಪ್ರತಿರೋಧ ಒಡ್ಡಲು ಸಜ್ಜಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.