ADVERTISEMENT

ಹಾಕಿ ಇಂಡಿಯಾ ನಿರ್ಧಾರ ನನ್ನ ಮುಗ್ಧತೆಗೆ ಸಾಕ್ಷಿ: ಕೌಶಿಕ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 19:59 IST
Last Updated 5 ಜುಲೈ 2013, 19:59 IST

ನವದೆಹಲಿ (ಪಿಟಿಐ): ಮಾಜಿ ಹಾಕಿ ಆಟಗಾರ ಎಂ.ಕೆ. ಕೌಶಿಕ್ ಅವರನ್ನು 2016ರ ರಿಯೋ ಡಿ ಜನೈರೋದ ಒಲಿಂಪಿಕ್ ವರೆಗೂ ಭಾರತ ಪುರುಷರ ಹಾಕಿ ತಂಡದ ಸಹಾಯಕ ಕೋಚ್ ಆಗಿ `ಹಾಕಿ ಇಂಡಿಯಾ' ನೇಮಿಸಿದೆ. ಇವರು ಮುಖ್ಯ ಕೋಚ್ ಮೈಕಲ್ ನಾಬ್ಸ್ ಜತೆಗೂಡಿ ಕಾರ್ಯ ನಿರ್ವಹಿಸಲಿದ್ದಾರೆ. 

ಲೈಂಗಿಕ ಕಿರುಕುಳ ಆರೋಪದ ಕಾರಣ (ನಂತರದಲ್ಲಿ ನಿರಪರಾಧಿ ಎಂದು ತಿಳಿದು ಬಂದಿತ್ತು) ಭಾರತ ಮಹಿಳಾ ಹಾಕಿ ತಂಡದ ಕೋಚ್ ಹುದ್ದೆಗೆ ಕೌಶಿಕ್ ರಾಜೀನಾಮೆ ನೀಡಿದ ಮೂರು ವರ್ಷಗಳ ಬಳಿಕ `ಹಾಕಿ ಇಂಡಿಯಾ'ದ ಈ ನಿರ್ಧಾರ ಹೊರಬಿದ್ದಿದೆ.

`ಇದೇ ಫೆಡರೇಷನ್ ನನ್ನ ವಿರುದ್ಧ ತನಿಖೆ ನಡೆಸಿತ್ತು. ಬಳಿಕ ನಾನು ದೋಷಮುಕ್ತ ಎಂದು ಸ್ಪಷ್ಟವಾಗಿತ್ತು.ಇದೀಗ ಅದೇ ಮತ್ತೆ ನನ್ನನ್ನು ಪುರುಷರ ತಂಡದ ಕೋಚ್ ಹುದ್ದೆಗೆ ಶಿಫಾರಸು ಮಾಡಿದೆ. ಇದುವೇ ನಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸುತ್ತದೆ' ಎಂದು ಕೌಶಿಕ್ ನುಡಿದ್ದಾರೆ.

`ದೇಶದ ತಂಡಕ್ಕೆ ತರಬೇತಿ ನೀಡುವುದು ಯಾವುದೇ ಆಟಗಾರನಿಗೆ ಗೌರವದ ಸಂಗತಿ. ಎಚ್‌ಐ ನನ್ನ ಹೆಸರನ್ನು ಸೂಚಿಸಿದ್ದು, ಅಂತಿಮ ನಿರ್ಧಾರ ಭಾರತ ಕ್ರೀಡಾ ಪ್ರಾಧಿಕಾರದ ಕೈಯಲ್ಲಿದೆ' ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT