ADVERTISEMENT

ಹಾಕಿ: ಡ್ರಾ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ

ಪಿಟಿಐ
Published 6 ಅಕ್ಟೋಬರ್ 2017, 19:31 IST
Last Updated 6 ಅಕ್ಟೋಬರ್ 2017, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪರ್ತ್‌: ಭಾರತ ‘ಎ’ ಮಹಿಳೆಯರ ತಂಡ ಆಸ್ಟ್ರೇಲಿಯಾ ಹಾಕಿ ಲೀಗ್‌ನಲ್ಲಿ ಶುಕ್ರವಾರ ನಾರ್ಥನ್‌ ಟೆರಿಟರಿ ವಿರುದ್ಧ 1–1ರಲ್ಲಿ ಡ್ರಾ ಮಾಡಿಕೊಂಡಿದೆ.

ಎರಡೂ ತಂಡಗಳು ಪಂದ್ಯದ ಆರಂಭದಿಂದ ಉತ್ತಮ ಪೈಪೋಟಿ ನಡೆಸಿದ್ದವು. ಟೆರಿಟರಿ ತಂಡ 15ನೇ ನಿಮಿಷದಲ್ಲಿಯೇ 1–0ಗೋಲಿನ ಆರಂಭ ಪಡೆಯಿತು. ಈ ತಂಡದ ಬ್ರೂಕ್‌ ಪೆರಿಸ್ ಫೀಲ್ಡ್ ಗೋಲು ದಾಖಲಿಸುವ ಮೂಲಕ ತಂಡದ ವಿಶ್ವಾಸ ಹೆಚ್ಚಿಸಿದರು.

ಒಂದು ಗೋಲಿನ ಹಿನ್ನಡೆ ಬಳಿಕ ಭಾರತ ತಂಡ ಧೃತಿಗೆಡದೆ ಗೋಲಿಗಾಗಿ ಸತತವಾಗಿ ಪ್ರಯತ್ನಿಸಿತು. 23 ವರ್ಷದೊಳಗಿನವರ ಯುವ ಆಟಗಾರ್ತಿಯರನ್ನು ಒಳಗೊಂಡ ತಂಡ ಎದುರಾಳಿಯ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ತೂರಿಸುವ ಉತ್ತಮ ಅವಕಾಶಕ್ಕಾಗಿ ಎದುರು ನೋಡಿತು.

ADVERTISEMENT

22ನೇ ನಿಮಿಷದಲ್ಲಿ ಗಗನ್‌ದೀಪ್ ಕೌರ್‌ ಟೆರಿಟರಿ ತಂಡದ ಎಲಿಜಬೆತ್‌ ಡುಗುದಿದ್ ಅವರನ್ನು ವಂಚಿಸಿ ಗೋಲು ದಾಖಲಿಸಿದರು. ಈ ಮೂಲಕ ಭಾರತ 1–1ರಲ್ಲಿ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ರಕ್ಷಣಾತ್ಮಕವಾಗಿ ಆಡಿದವು .ಮುಂದಿನ ಪಂದ್ಯದಲ್ಲಿ ಭಾರತ ‘ಎ’ ತಂಡ ಆಸ್ಟ್ರೇಲಿಯಾ ಕ್ಯಾಪಿಟಲ್ ಟೆರಿಟರಿ ಎದುರು ಆಡಲಿದೆ.

ಪುರುಷರ ತಂಡಕ್ಕೆ ಸೋಲು: ಭಾರತ ‘ಎ’ ಪುರುಷರ ತಂಡ 0–4ಗೋಲುಗಳಿಂದ ಕ್ವೀನ್ಸ್‌ಲ್ಯಾಂಡ್‌ ವಿರುದ್ಧ ಸೋತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.