
ಪ್ರಜಾವಾಣಿ ವಾರ್ತೆಲಂಡನ್ (ಪಿಟಿಐ): ಕಳೆದ ಸಲದ ಚಾಂಪಿಯನ್ ಜರ್ಮನಿ ಲಂಡನ್ ಒಲಿಂಪಿಕ್ಸ್ ಪುರುಷರ ವಿಭಾಗದ ಹಾಕಿಯಲ್ಲಿ ಈ ಸಲವೂ ಫೈನಲ್ ಪ್ರವೇಶಿಸಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಜರ್ಮನಿ 4-2ಗೋಲುಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿತು.
ಆಸ್ಟ್ರೇಲಿಯಾದ ಮ್ಯಾಕ್ಸ್ ವೈನ್ ಹೋಲ್ಡ್ 22ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇನ್ನೊಂದು ಗೋಲನ್ನು ಇದಾದ ನಾಲ್ಕು ನಿಮಿಷದ ನಂತರ ಜರ್ಮನಿಯ ಮೊರಿಟ್ಜಾ ಫ್ಯೂರಿಸ್ಟ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ತಂದಿತ್ತರು.
2004ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಆಸ್ಟ್ರೇಲಿಯಾ ನಂತರ ಪ್ರಬಲ ಹೋರಾಟ ತೋರುವಲ್ಲಿ ವಿಫಲವಾಯಿತು. ನಂತರ ಚುರುಕಾದ ಪ್ರದರ್ಶನ ನೀಡಿದ ಜರ್ಮನಿ ಫೈನಲ್‌ಗೆ ಲಗ್ಗೆ ಇಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.