ADVERTISEMENT

ಹಾಕಿ: ಮಾಜಿ ಆಟಗಾರರಿಗೆ ಗೌರವ ಧನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST

ನವದೆಹಲಿ (ಪಿಟಿಐ): ಹಾಕಿ ಇಂಡಿಯಾ (ಎಚ್‌ಐ) ಒಟ್ಟು 34 ಮಾಜಿ ಒಲಿಂಪಿಯನ್‌ಗಳಿಗೆ ತಲಾ ಎರಡು ಲಕ್ಷ ರೂ. ಗೌರವ ಧನ ನೀಡಿ ಸನ್ಮಾನಿಸಿತು. ಬಿಸಿಸಿಐ ಇತ್ತೀಚೆಗೆ ಮಾಜಿ ಆಟಗಾರರಿಗೆ ಇದೇ ರೀತಿಯಲ್ಲಿ ಗೌರವ ಧನ ನೀಡಿತ್ತು.

ನಗರದ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ 34 ಒಲಿಂಪಿಯನ್‌ಗಳಲ್ಲಿ 26 ಮಂದಿ ಹಾಜರಿದ್ದರು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿದ್ದ ಲೆಸ್ಲಿ ಕ್ಲಾಡಿಯಸ್ (1948 ಲಂಡನ್, 1952 ಹೆಲ್ಸಿಂಕಿ ಮತ್ತು 1956 ಮೆಲ್ಬರ್ನ್), ಕೇಶವ್ ದತ್ತ್ (1948 ಲಂಡನ್, 1952 ಹೆಲ್ಸಿಂಕಿ), ಜಸ್ವಂತ್ ರಾಜ್‌ಪೂತ್ (1948 ಲಂಡನ್, 1952 ಹೆಲ್ಸಿಂಕಿ) ಮತ್ತು ಹರ್ಪಾಲ್ ಕೌಶಿಕ್ (1956 ಮೆಲ್ಬರ್ನ್, 1964 ಟೋಕಿಯೊ) ಅವರು ಪ್ರಮುಖರಾಗಿದ್ದರು.

ಎಸ್.ಎಂ. ಅಲಿ ಸಯ್ಯದ್, ಚರಣ್‌ಜೀತ್ ಸಿಂಗ್, ನಂದಿ ಸಿಂಗ್ ಮತ್ತು ಬಲ್ಬೀರ್ ಸಿಂಗ್ ಅನಾರೋಗ್ಯದ ಕಾರಣ ಸಮಾರಂಭಕ್ಕೆ ಆಗಮಿಸಲಿಲ್ಲ. ಎ.ಎಸ್. ರಾಣಾ, ಆ್ಯಲನ್ ಶೆಫೀಲ್ಡ್, ದರ್ಶನ್ ಸಿಂಗ್ ಮತ್ತು ಗುರುದೇವ್ ಸಿಂಗ್ ಅವರು ಸದ್ಯ ವಿದೇಶದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.