ADVERTISEMENT

ಹೊಸ ಸ್ಕೋರಿಂಗ್‌ ಯೋಜನೆ ಕೈಬಿಟ್ಟ ಬಿಡಬ್ಲ್ಯುಎಫ್‌

ಏಜೆನ್ಸೀಸ್
Published 19 ಮೇ 2018, 20:11 IST
Last Updated 19 ಮೇ 2018, 20:11 IST
ವಿಕ್ಟರ್‌ ಆ್ಯಕ್ಸಲ್‌ಸನ್‌
ವಿಕ್ಟರ್‌ ಆ್ಯಕ್ಸಲ್‌ಸನ್‌   

ಬ್ಯಾಂಕಾಕ್‌: ಆಟಗಾರರು ಮತ್ತು ಬ್ಯಾಡ್ಮಿಂಟನ್‌ ಸಂಸ್ಥೆಗಳ ವಿರೋಧದ ಕಾರಣ ವಿಶ್ವ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಡಬ್ಲ್ಯುಎಫ್‌) ಹೊಸ ಸ್ಕೋರಿಂಗ್‌ ಯೋಜನೆಯನ್ನು ಕೈಬಿಟ್ಟಿದೆ.

ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಕ್ರೀಡಾಂಗಣದತ್ತ ಸೆಳೆಯುವ ಉದ್ದೇಶದಿಂದ ಬಿಡಬ್ಲ್ಯುಎಫ್‌, ಈಗಿರುವ 21 ಪಾಯಿಂಟ್ಸ್‌ಗಳ ಮೂರು ಸೆಟ್‌ಗಳ ನಿಯಮದ ಬದಲಾಗಿ 11 ಪಾಯಿಂಟ್ಸ್‌ಗಳ ಐದು ಸೆಟ್‌ಗಳ ನಿಯಮ ಜಾರಿಗೆ ತರಲು ನಿರ್ಧರಿಸಿತ್ತು.

‘ಹೊಸ ಯೋಜನೆಯ ಅನ್ವಯ 11 ಪಾಯಿಂಟ್ಸ್‌ಗಳ ಐದು ಸೆಟ್‌ಗಳನ್ನು ಆಡಬೇಕಾಗುತ್ತದೆ. ಇದರಿಂದ ಆಟಗಾರರು ಹೆಚ್ಚು ದಣಿಯುತ್ತಾರೆ. ಇದು ಪ್ರೇಕ್ಷಕರಲ್ಲೂ ನಿರಾಸಕ್ತಿ ಮೂಡಿಸಲಿದೆ. ಈಗಿರುವ ನಿಯಮ ಅನುಕೂಲಕರವಾಗಿದೆ. ಇದನ್ನು ಬದಲಿಸುವ ಅಗತ್ಯವೇನಿದೆ’ ಎಂದು ಡೆನ್ಮಾರ್ಕ್‌ನ ಆಟಗಾರ ವಿಕ್ಟರ್‌ ಆ್ಯಕ್ಸಲ್‌ಸನ್‌ ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.