ADVERTISEMENT

ಜೂನ್ 14ರಂದು ಬೆಂಗಳೂರಿನಲ್ಲಿ ಆಫ್ಗಾನಿಸ್ತಾನ–ಭಾರತ ಟೆಸ್ಟ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆಫ್ಘಾನಿಸ್ತಾನ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಾದ ಮಶಾಲ್ ಅತೀಫ್, ಶಫೀಕ್ ಸ್ಥಾನಿಕ್‌ಜಾಯ್. ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ಸಿಇಒ ರಾಹುಲ್ ಜೊಹ್ರಿ ಭಾಗವಹಿಸಿದ್ದರು.
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆಫ್ಘಾನಿಸ್ತಾನ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಾದ ಮಶಾಲ್ ಅತೀಫ್, ಶಫೀಕ್ ಸ್ಥಾನಿಕ್‌ಜಾಯ್. ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ಸಿಇಒ ರಾಹುಲ್ ಜೊಹ್ರಿ ಭಾಗವಹಿಸಿದ್ದರು.   

ನವದೆಹಲಿ (ಎಎಫ್‌ಪಿ): ಭಾರತ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವಣ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸುವುದು ಖಚಿತವಾಗಿದೆ.

‘ಜೂನ್ 14ರಿಂದ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯವನ್ನು ನಡೆಸಲು ಯೋಜನೆ ರೂಪಿಸಲಾಗಿದೆ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಮಂಗಳವಾರ ತಿಳಿಸಿದೆ.

‘ಟೆಸ್ಟ್‌ ಮಾನ್ಯತೆ ಪಡೆದಿರುವ ಅಫ್ಗಾನಿಸ್ತಾನ ತಂಡದ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.

ADVERTISEMENT

‘ಜೂನ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ವಾತಾವರಣ ತಂಪಾಗಿರುತ್ತದೆ. ಮಳೆಗಾಲ ಆರಂಭವಾಗಿರುತ್ತದೆ. ಟೆಸ್ಟ್ ಪಂದ್ಯ ಆಡಲು ಇದು ಉತ್ತಮ ಸ್ಥಳ. ಐತಿಹಾಸಿಕ ಪಂದ್ಯವನ್ನು ಸಾಕಷ್ಟು ಗಣ್ಯರು ವೀಕ್ಷಿಸುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.

ವೇಳಾಪಟ್ಟಿ ಗೊಂದಲ (ಪಿಟಿಐ): ಬೆಂಗಳೂರಿನಲ್ಲಿ ನಡೆಯುವ ಪಂದ್ಯದ ವೇಳಾಪಟ್ಟಿ ಕುರಿತು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ, ಖಜಾಂಚಿ ಅನಿರುದ್ಧ ಜೋಶಿ ಹಾಗೂ  ಹಿರಿಯ ಸದಸ್ಯ ರಾಜೀವ್ ಶುಕ್ಲಾ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಅಮಿತಾಭ್ ಚೌಧರಿ ಹಾಗೂ ಸಿಇಒ ರಾಹುಲ್ ಜೊಹ್ರಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.