ADVERTISEMENT

ಬ್ಯಾಡ್ಮಿಂಟನ್‌: ಸೆಮಿಗೆ ಆ್ಯಕ್ಸಲ್‌ಸನ್‌

ಏಜೆನ್ಸೀಸ್
Published 19 ಜನವರಿ 2018, 19:19 IST
Last Updated 19 ಜನವರಿ 2018, 19:19 IST
ಥಾಯ್ಲೆಂಡ್‌ನ ರಚನಾಕ್‌ ಇಂಟನಾನ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯ ಪಂದ್ಯದಲ್ಲಿ ಷಟಲ್ ಹಿಂತಿರುಗಿಸಲು ಮುಂದಾದರು ಎಎಫ್‌ಪಿ ಚಿತ್ರ
ಥಾಯ್ಲೆಂಡ್‌ನ ರಚನಾಕ್‌ ಇಂಟನಾನ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯ ಪಂದ್ಯದಲ್ಲಿ ಷಟಲ್ ಹಿಂತಿರುಗಿಸಲು ಮುಂದಾದರು ಎಎಫ್‌ಪಿ ಚಿತ್ರ   

ಕ್ವಾಲಾಲಂಪುರ: ವಿಶ್ವದ ಅಗ್ರಶ್ರೇಯಾಂಕಿತ ಆಟಗಾರ ವಿಕ್ಟರ್‌ ಆ್ಯಕ್ಸಲ್‌ಸನ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್ ಹೋರಾಟದಲ್ಲಿ ವಿಕ್ಟರ್‌ 21–15, 19–21, 21–12ರಲ್ಲಿ ಜೊನಾಥನ್‌ ಕ್ರಿಸ್ಟಿ ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ಕೆಂಟಾ ನಿಶಿಮೋಟೊ 18–21, 21–19, 21–16ರಲ್ಲಿ ಹಾಂಕಾಂಗ್‌ನ ಆ್ಯಂಗಸ್‌ ನಾಗ್‌ ಕಾ ಲಾಂಗ್‌ ಅವರನ್ನು ಸೋಲಿಸಿದರು.

ADVERTISEMENT

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಕ್ಯಾರೋಲಿನಾ ಮರಿನ್‌ 21–17, 21–16ರಲ್ಲಿ ಲೀ ಯಿಂಗ್‌ ಯಿಂಗ್‌ ಎದುರೂ, ತೈ ಜು ಯಿಂಗ್‌ 21–18, 21–15ರಲ್ಲಿ ಚೆನ್‌ ಯೂಫಿ ಮೇಲೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.