ADVERTISEMENT

‘ಬಜೆಟ್‌ನಲ್ಲಿ ಶಿಕ್ಷಣ ಅನುದಾನ ಸಾಲದು’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:39 IST
Last Updated 2 ಫೆಬ್ರುವರಿ 2018, 19:39 IST
‘ಬಜೆಟ್‌ನಲ್ಲಿ ಶಿಕ್ಷಣ ಅನುದಾನ ಸಾಲದು’
‘ಬಜೆಟ್‌ನಲ್ಲಿ ಶಿಕ್ಷಣ ಅನುದಾನ ಸಾಲದು’   

ಬೆಂಗಳೂರು: ‘ಶಿಕ್ಷಣಕ್ಕೆ ಬಜೆಟ್‌ನಲ್ಲಿ ಈ ಬಾರಿ ಮೀಸಲು ಇಟ್ಟಿರುವ ಹಣ ತೃಪ್ತಿದಾಯಕವಲ್ಲ. ಶಿಕ್ಷಣಕ್ಕೆ ಪ್ರತ್ಯೇಕ ಬಜೆಟ್‌ ಮಂಡಿಸಬೇಕು’ ಎಂದು ಹೈಕೋರ್ಟ್‌ ವಕೀಲ ಕೆ.ಎಸ್‌.ರವಿಶಂಕರ್‌ ಅಭಿಪ್ರಾಯಪಟ್ಟರು. 

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬಜೆಟ್‌ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರೊ. ಪುಲಕ್‌ ಘೋಷ್‌, ‘ಆರಂಭದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸುಧಾರಿಸಲು ಆದ್ಯತೆ ನೀಡಬೇಕು. ಬಳಿಕ ಉನ್ನತ ಶಿಕ್ಷಣದತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮುಂಬೈನ ಎನ್‌.ಜಿ.ಎನ್‌ ಪುರಾಣಿಕ್‌, ‘ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಒತ್ತು ಕೊಡಲಾಗಿದೆ. ಪಶುಸಂಗೋಪನೆಗೆ ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯದೇ. ಉತ್ಪಾದನೆ ಹೆಚ್ಚು ಇದ್ದಾಗ, ಬೆಳೆಗೆ ಹೆಚ್ಚು ಬೆಲೆ ಸಿಗುವುದಿಲ್ಲ. ಆದರೆ, ಇದು ರೈತರಿಗೆ ಎಷ್ಟುರ ಮಟ್ಟಿಗೆ ಪ್ರಯೋಜನವಾಗುತ್ತದೆ ಎಂಬುದನ್ನು ನೋಡಬೇಕು’ ಎಂದರು.

ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಸರ್ವಿಸ್‌ನ ಮುಖ್ಯಸ್ಥ ಟಿ.ವಿ ಮೋಹನದಾಸ್‌ ಪೈ ಸಮನ್ವಯಕಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.