ADVERTISEMENT

19 ವರ್ಷದೊಳಗಿನವರ ವಿಶ್ವಕಪ್ ಗೆಲುವಿನ ಹಿಂದೆ ಕರ್ನಾಟಕದ ರಾಹುಲ್‌ ದ್ರಾವಿಡ್‌ ಸೇವೆ ಅನನ್ಯ: ಮೋದಿ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 14:19 IST
Last Updated 4 ಫೆಬ್ರುವರಿ 2018, 14:19 IST
19 ವರ್ಷದೊಳಗಿನವರ ವಿಶ್ವಕಪ್ ಗೆಲುವಿನ ಹಿಂದೆ ಕರ್ನಾಟಕದ ರಾಹುಲ್‌ ದ್ರಾವಿಡ್‌ ಸೇವೆ ಅನನ್ಯ: ಮೋದಿ ಪ್ರಶಂಸೆ
19 ವರ್ಷದೊಳಗಿನವರ ವಿಶ್ವಕಪ್ ಗೆಲುವಿನ ಹಿಂದೆ ಕರ್ನಾಟಕದ ರಾಹುಲ್‌ ದ್ರಾವಿಡ್‌ ಸೇವೆ ಅನನ್ಯ: ಮೋದಿ ಪ್ರಶಂಸೆ   

ಬೆಂಗಳೂರು: ಆರು ವರ್ಷಗಳ ನಂತರ ಭಾರತದ ಯುವಪಡೆಯು ಕ್ರಿಕೆಟ್‌ನಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದು ಸಂಭ್ರಮಿಸಲು ನಿಸ್ವಾರ್ಥ ಸೇವೆ ಸಲ್ಲಿಸಿದ ಭಾರತ ತಂಡದ ಮುಖ್ಯ ಕೋಚ್ ರಾಹುಲ್‌ ದ್ರಾವಿಡ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು. 

ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ 75 ದಿನಗಳ ಕಾಲ ನಡೆದ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದು ಸಂಭ್ರಮಿಸಿದೆ. ಈ ಮೂಲಕ ಭಾರತಕ್ಕೆ ಗೌರವ ತಂದುಕೊಟ್ಟಿದೆ ಎಂದು ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಇದು ಭಾರತದ ಜನತೆ ಹೆಮ್ಮೆ ಪಡುವ ಸಂಗತಿ. ಇದರ ಹಿಂದೆ ಟೊಂಕಕಟ್ಟಿ ನೆರವಾಗಿ ನಿಂತವರಲ್ಲಿ ಮುಖ್ಯ ಕೋಚ್‌ ಕರ್ನಾಟಕದ ರಾಹುಲ್‌ ದ್ರಾವಿಡ್‌ ಇದ್ದಾರೆ. ಅವರನ್ನು ಎಷ್ಟು ಪ್ರಶಂಸೆ ಮಾಡಿದರೂ ಸಾಲದು ಎಂದರು.

ADVERTISEMENT

ನಿಸ್ವಾರ್ಥ ಸೇವೆ ಕರ್ನಾಟಕದ ಸಂಸ್ಕೃತಿ. ಇದಕ್ಕೆ ರಾಹುಲ್‌ ದ್ರಾವಿಡ್‌ ಸಾಕ್ಷಿ ಎಂದು ಮೋದಿ ಕೊಂಡಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.