ADVERTISEMENT

ಜೈನ್‌ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
ಪ್ರಶಸ್ತಿ ಗೆದ್ದ ಜೈನ್‌ ವಿಶ್ವವಿದ್ಯಾಲಯ ತಂಡದ ಆಟಗಾರರು (ನಿಂತವರು; ಎಡದಿಂದ ಬಲಕ್ಕೆ); ಧರಣಿ, ಜ್ಞಾನೇಶ್‌, ವೈಶಕ್‌ ಪುನೀತ್, ಸುರೇಶ್ (ಮುಖ್ಯ ಕೋಚ್‌), ಯತೀಶ್ ಬಾಬು (ಆರ್‌ಸಿಬಿ ಮುಖ್ಯಸ್ಥ), ಪ್ರದೀಪ್ ಕುಮಾರ್‌ (ಮ್ಯಾನೇಜರ್‌), ಶರತ್‌ (ನಾಯಕ), ಬ್ರಯನ್‌, ಅಭಿಷೇಕ್ ಗೌಡ (ಕುಳಿತವರು); ಮನೋಜ್, ಅರ್ಜುನ್‌, ನಿತಿನ್, ಕಿಶನ್‌, ದೇವಿಪ್ರಸಾದ್, ನಿಖಿಲ್ ಚಂದ್ರಶೇಖರ್‌.

ಬೆಂಗಳೂರು: ಜೈನ್ ವಿಶ್ವವಿದ್ಯಾಲಯ ತಂಡ ಬಿಜಿಎಸ್‌ ಕಪ್‌ಗಾಗಿ ಇಲ್ಲಿ ನಡೆದ ಅಖಿಲ ಭಾರತ ಅಂತರ ಕಾಲೇಜುಗಳ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.

ಬಸವೇಶ್ವರ ನಗರದಲ್ಲಿರುವ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜೈನ್ ವಿಶ್ವವಿದ್ಯಾಲಯ 79–64 ಪಾಯಿಂಟ್ಸ್‌ಗಳಿಂದ ಚೆನ್ನೈನ ಎಸ್‌ಆರ್‌ಎಮ್‌ ವಿಶ್ವವಿದ್ಯಾಲಯ ತಂಡವನ್ನು ಮಣಿಸಿದೆ. ವಿರಾಮದ ವೇಳೆಗೆ ಜೈನ್ ತಂಡ 41-36ರಲ್ಲಿ ಮುಂದಿತ್ತು.

ಪ್ರಶಸ್ತಿ ಗೆದ್ದ ಜೈನ್ ವಿ.ವಿ ತಂಡ ₹50,000 ಬಹುಮಾನ ಮೊತ್ತವನ್ನು ಪಡೆದುಕೊಂಡಿತು. ಈ ತಂಡದ ಧರಣಿ (24) ಹಾಗೂ ಸಿ.ನಿಖಿಲ್‌ (15) ಹೆಚ್ಚು ಪಾಯಿಂಟ್ಸ್ ಕಲೆಹಾಕಿದರು.

ADVERTISEMENT

ಜೈನ್‌ ವಿ.ವಿ ತಂಡದ ಧರಣಿ ಕುಮಾರ್‌ ‘ಅತ್ಯುತ್ತಮ ಆಟಗಾರ’ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.