ADVERTISEMENT

ಆರ್ಯಮನ್ ಬಿರ್ಲಾ ಶತಕ

ಪಿಟಿಐ
Published 16 ನವೆಂಬರ್ 2018, 18:34 IST
Last Updated 16 ನವೆಂಬರ್ 2018, 18:34 IST

ಕೋಲ್ಕತ್ತ: ಶ್ರೀಮಂತ ಉದ್ಯಮಿ ಕುಮಾರ್ ಬಿರ್ಲಾ ಅವರ ಮಗ ಆರ್ಯಮನ್ ಬಿರ್ಲಾ ಕ್ರಿಕೆಟ್‌ ರಂಗದಲ್ಲಿ ತಮ್ಮದೇ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಗುರುವಾರ ಅವರು ತಮ್ಮ ಆಟದ ಸಾಮರ್ಥ್ಯವನ್ನು ಸಾಬೀತು ಮಾಡಿದರು.

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡದಲ್ಲಿ ಆಡುತ್ತಿರುವ ಬ್ಯಾಟ್ಸ್‌ಮನ್ ಆರ್ಯಮನ್ ಶತಕ (ಔಟಾಗದೆ 103; 189ಎಸೆತ, 12ಬೌಂಡರಿ, 1 ಸಿಕ್ಸರ್) ಸಿಡಿಸಿ ಗಮನ ಸೆಳೆದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರ ಮೊದಲ ಶತಕವಾಗಿದೆ. ಹೋದವರ್ಷ ಒಡಿಶಾ ತಂಡದ ಎದುರಿನಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದ್ದರು. 21 ವರ್ಷದ ಆರ್ಯಮನ್ ತಾವು ಆಡಿದ ಮೂರನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಶುಭಂ ಶರ್ಮಾ (ಔಟಾಗದೆ 100; 134ಎಸೆತ, 11ಬೌಂಡರಿ, 1ಸಿಕ್ಸರ್) ಅವರೊಂದಿಗೆ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 171 ರನ್‌ ಸೇರಿಸಿದರು. ಇದರಿಂದಾಗಿ ಮಧ್ಯಪ್ರದೇಶ ಸೋಲಿನಿಂದ ಪಾರಾಯಿತು. ಮೊದಲ ಇನಿಂಗ್ಸ್‌ನಲ್ಲಿ ಅವರು 12 ರನ್‌ ಗಳಿಸಿದ್ದರು. ಪಂದ್ಯ ಡ್ರಾ ಆಯಿತು.

ಹೋದ ಐಪಿಎಲ್‌ನಲ್ಲಿ ಆರ್ಯಮನ್ ಅವರಿಗೆ ₹ 30 ಲಕ್ಷ ಮೌಲ್ಯ ನೀಡಿದ್ದ ರಾಜಸ್ಥಾನ ರಾಯಲ್ಸ್‌ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು.

ADVERTISEMENT

ಸಂಕ್ಷಿಪ್ತ ಸ್ಕೋರು: ಬಂಗಾಳ: 149.3 ಓವರ್‌ಗಳಲ್ಲಿ 9ಕ್ಕೆ 510; ಮಧ್ಯಪ್ರದೇಶ: 335 ಮತ್ತು ಫಾಲೋ ಆನ್ 68.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 240 (ಆರ್ಯಮನ್ ಬಿರ್ಲಾ ಔಟಾಗದೆ 103, ಶುಭಂ ಶರ್ಮಾ 100, ಅನುಸ್ತೂಪ್ ಮಜುಮದಾರ್ 60ಕ್ಕೆ2) ಫಲಿತಾಂಶ : ಡ್ರಾ. ಬಂಗಾಳಕ್ಕೆ 3 ಮತ್ತು ಮಧ್ಯಪ್ರದೇಶಕ್ಕೆ 1 ಪಾಯಿಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.