ADVERTISEMENT

ಮಿಡ್ಲ್‌ಸೆಕ್ಸ್‌ ಪರ ಡಿವಿಲಿಯರ್ಸ್‌ ಆಟ

ಏಜೆನ್ಸೀಸ್
Published 25 ಫೆಬ್ರುವರಿ 2019, 16:19 IST
Last Updated 25 ಫೆಬ್ರುವರಿ 2019, 16:19 IST

ಲಂಡನ್‌: ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್‌, ಕೌಂಟಿ ಕ್ರಿಕೆಟ್‌ನ ಟ್ವೆಂಟಿ–20 ಬ್ಲಾಸ್ಟ್‌ ಟೂರ್ನಿಯಲ್ಲಿ ಮಿಡ್ಲ್‌ಸೆಕ್ಸ್‌ ತಂಡದ ಪರ ಆಡಲಿದ್ದಾರೆ.

ಮಿಡ್ಲ್‌ಸೆಕ್ಸ್‌ ಕ್ಲಬ್‌ ಸೋಮವಾರ ಈ ವಿಷಯವನ್ನು ಪ್ರಕಟಿಸಿದೆ.

35 ವರ್ಷ ವಯಸ್ಸಿನ ಡಿವಿಲಿಯರ್ಸ್‌, ಆರಂಭದ ಏಳು ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ADVERTISEMENT

‘ಕೌಂಟಿ ಕ್ರಿಕೆಟ್‌ನಲ್ಲಿ ಆಡಬೇಕೆಂಬ ಆಸೆ ಇತ್ತು. ಅದು ಈಗ ಸಾಕಾರಗೊಳ್ಳುತ್ತಿದೆ. ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದು ಸಂತಸ ನೀಡಿದೆ. ಲಾರ್ಡ್ಸ್‌ ಅಂಗಳದಲ್ಲಿ ಪಂದ್ಯಗಳನ್ನು ಆಡುವುದು ವಿಶೇಷ ಅನುಭವ ನೀಡಲಿದೆ’ ಎಂದು ಡಿವಿಲಿಯರ್ಸ್‌ ಹೇಳಿದ್ದಾರೆ.

ಎಬಿಡಿ, ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.