ADVERTISEMENT

ಕ್ರಿಕೆಟ್‌: ಭಾರತ ಯುವ ತಂಡಕ್ಕೆ ಭರ್ಜರಿ ಜಯ

ಪಿಟಿಐ
Published 13 ಡಿಸೆಂಬರ್ 2018, 17:25 IST
Last Updated 13 ಡಿಸೆಂಬರ್ 2018, 17:25 IST

ಕೊಲಂಬೊ: ನಿತೀಶ್ ರಾಣ ಮತ್ತು ಹಿಮ್ಮತ್ ಸಿಂಗ್ ಅವರ ಅಮೋಘ ಅರ್ಧಶತಕಗಳ ಬಲದಿಂದ ಭಾರತ ತಂಡ ಏಷ್ಯಾ ಕ್ರಿಕೆಟ್ ಸಮಿತಿಯ ಯುವ ಆಟಗಾರರ ಏಷ್ಯಾಕಪ್‌ ಕ್ರಿಕೆಟ್ ಟೂರ್ನಿಯ ಫೈನಲ್‌ ಪ್ರವೇಶಿಸಿತು.

ಗುರುವಾರದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.

ಪಾಕ್ ತಂಡ ಮುಂದಿಟ್ಟ 173 ರನ್‌ಗಳ ಜಯದ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ನಿತೀಶ್ ರಾಣ (60; 60 ಎಸೆತ, 3 ಸಿಕ್ಸರ್‌) ಮತ್ತು ಹಿಮ್ಮತ್ ಸಿಂಗ್ (59; 58 ಎಸೆತ, 5 ಸಿಕ್ಸರ್‌) ನಾಲ್ಕನೇ ವಿಕೆಟ್‌ಗೆ 126 ರನ್‌ ಸೇರಿಸಿ ತಂಡವನ್ನು ಪತನದಿಂದ ಕಾಪಾಡಿದರು.

ADVERTISEMENT

ಮೊಹಮ್ಮದ್ ಅಸ್ಗರ್‌ ಅವರ ಓವರ್‌ನಲ್ಲಿ ಸತತ ಮೂರು ಸಿಕ್ಸರ್ ಒಳಗೊಂಡಂತೆ ಹಿಮ್ಮತ್‌ ಸಿಂಗ್‌ ಒಟ್ಟು ಐದು ಬಾರಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು.ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 44.4 ಓವರ್‌ಗಳಲ್ಲಿ 172 ರನ್‌ಗಳಿಗೆ ಪತನ ಕಂಡಿತು.

ನಾಯಕ ಮತ್ತು ವಿಕೆಟ್ ಕೀಪರ್‌ ಮೊಹಮ್ಮದ್‌ ರಿಜ್ವಾನ್‌ 67 ಮತ್ತು ಸಾವೂದ್ ಶಕೀಲ್‌ 62 ರನ್ ಗಳಿಸಿದರು. ಲೆಗ್ ಸ್ಪಿನ್ನರ್ ಮಯಂಕ್ ಮಾರ್ಕಂಡೆ 38ಕ್ಕೆ 4 ವಿಕೆಟ್ ಕಬಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.