ADVERTISEMENT

ಅಫ್ಗಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್‌ಗೆ ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ

ಪಿಟಿಐ
Published 26 ನವೆಂಬರ್ 2023, 19:56 IST
Last Updated 26 ನವೆಂಬರ್ 2023, 19:56 IST
<div class="paragraphs"><p>ಅಫ್ಗಾನಿಸ್ತಾನದ ಆಲ್‌ರೌಂಡರ್ ರಶೀದ್ ಖಾನ್&nbsp;</p></div>

ಅಫ್ಗಾನಿಸ್ತಾನದ ಆಲ್‌ರೌಂಡರ್ ರಶೀದ್ ಖಾನ್ 

   

ಪಿಟಿಐ ಚಿತ್ರ

ಲಂಡನ್: ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ಆಟಗಾರ ರಶೀದ್ ಖಾನ್ ಅವರು ತಮ್ಮ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಗೊಗಾಗಿದ್ದಾರೆ.

ADVERTISEMENT

ಇದರಿಂದಾಗಿ ಅವರು ಡಿ. 7ರಿಂದ ಆರಂಭವಾಗುವ ಬಿಗ್‌ ಬ್ಯಾಷ್ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವುದಿಲ್ಲ. ಅವರು ಅಡಿಲೇಡ್ ಸ್ಟ್ರೈಕರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

‘ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ಎದುರು ಅಫ್ಗಾನಿಸ್ತಾನ ಜಯಿಸುವಲ್ಲಿ ರಶೀದ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅನುಭವ ಮತ್ತು ಆಟ ಎರಡೂ ತಂಡದ ಬಲ ಹೆಚ್ಚಿಸಿವೆ. ತಮ್ಮ ಕೆಳಬೆನ್ನಿನ ಗಾಯಕ್ಕೆ ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ’ ಎಂದು ಅಫ್ಗನ್‌ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.