ADVERTISEMENT

ಬಾಂಗ್ಲಾ ಕ್ರಿಕೆಟಿಗ ಮುಷ್ಫಿಕುರ್‌ ಬ್ಯಾಟ್‌ ಖರೀದಿಸಿದ ಶಾಹಿದ್‌ ಅಫ್ರಿದಿ

ಏಜೆನ್ಸೀಸ್
Published 16 ಮೇ 2020, 19:45 IST
Last Updated 16 ಮೇ 2020, 19:45 IST
ಶಾಹಿದ್‌ ಅಫ್ರಿದಿ
ಶಾಹಿದ್‌ ಅಫ್ರಿದಿ    

ಢಾಕಾ: ಬಾಂಗ್ಲಾದೇಶದ ಕ್ರಿಕೆಟಿಗ ಮುಷ್ಫಿಕುರ್‌ ರಹೀಮ್‌ ಅವರು ಕೋವಿಡ್‌ –19 ಪಿಡುಗಿನಿಂದ ಸಂಕಷ್ಟದಲ್ಲಿರುವವರಿಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ ಹರಾಜಿಗಿಟ್ಟಿದ್ದ ಬ್ಯಾಟ್‌ ಅನ್ನು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶಾಹೀದ್‌ ಅಫ್ರಿದಿ₹15.17 ಲಕ್ಷಕ್ಕೆ ಖರೀದಿಸಿದ್ದಾರೆ.

2013ರಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಮುಷ್ಫಿಕುರ್‌ ಅವರು ದ್ವಿಶತಕ ಸಿಡಿಸಿದ್ದರು. ಆಗ ಬಳಸಿದ್ದ ಬ್ಯಾಟ್‌ ಅನ್ನು ಅವರು ಹೋದ ವಾರ ಆನ್‌ಲೈನ್‌ನಲ್ಲಿ ಹರಾಜಿಗಿಟ್ಟಿದ್ದರು. ವ್ಯಕ್ತಿಯೊಬ್ಬರು ₹ 38 ಲಕ್ಷಕ್ಕೆ‌ ಬಿಡ್‌ ಮಾಡಿದ್ದರು. ಅದು ನಕಲಿ ಬಿಡ್‌ ಎಂಬುದು ಖಾತರಿಯಾದ ಬಳಿಕ ಬಿಡ್‌ ಪ್ರಕ್ರಿಯೆಯನ್ನು ರದ್ದು ಮಾಡಲಾಗಿತ್ತು.

‘ಬಿಡ್‌ ರದ್ದಾದ ವಿಷಯ ತಿಳಿದ ಕೂಡಲೇಅಫ್ರಿದಿ ಅವರು ನನಗೆ ಕರೆ ಮಾಡಿ ಮಾತನಾಡಿದರು. ಬಳಿಕ ಅವರಿಗೆ ಆನ್‌ಲೈನ್‌ ಬಿಡ್‌ನ ಲಿಂಕ್‌ ಕಳುಹಿಸಿದ್ದೆ. ಮೇ 13ರಂದು ನನಗೆ ಪತ್ರವೊಂದನ್ನು ರವಾನಿಸಿದ್ದ ಅವರು ₹15.17 ಲಕ್ಷಕ್ಕೆ ಬ್ಯಾಟ್‌ ಖರೀದಿಸಲು ಆಸಕ್ತಿ ಹೊಂದಿರುವುದಾಗಿ ಅದರಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ನನಗೆ ತುಂಬಾ ಸಂತಸವಾಯಿತು’ ಎಂದು ಮುಷ್ಫಿಕುರ್‌ ತಿಳಿಸಿದ್ದಾರೆ.

ADVERTISEMENT

ಈ ಮೊತ್ತವನ್ನು ಕೋವಿಡ್‌ ಸಂತ್ರಸ್ಥರಿಗೆ ನೆರವು ನೀಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಕೊಡುವುದಾಗಿ ಮುಷ್ಫಿಕುರ್‌ ಅವರ ವ್ಯವಹಾರ ನೋಡಿಕೊಳ್ಳುವ ಸಂಸ್ಥೆ ಸ್ಪಷ್ಟಪಡಿಸಿದೆ.

‘ನಾವೀಗ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಈ ಸಮಯದಲ್ಲಿ ನಿರಾಶ್ರಿತರು ಹಾಗೂ ನಿರ್ಗತಿಕರಿಗೆ ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ಅಫ್ರಿದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.