ADVERTISEMENT

ಸ್ಪಿನ್ನರ್‌ಗಳಿಗೆ ಶಿಬಿರ: ಹರಭಜನ್ ಸಿಂಗ್ ನೆರವು ಕೋರಿದ ಬಿಸಿಸಿಐ

ಪಿಟಿಐ
Published 2 ಮಾರ್ಚ್ 2026, 15:58 IST
Last Updated 2 ಮಾರ್ಚ್ 2026, 15:58 IST
<div class="paragraphs"><p> ಹರಭಜನ್ ಸಿಂಗ್ (ಸಂಗ್ರಹ ಚಿತ್ರ)</p></div>

ಹರಭಜನ್ ಸಿಂಗ್ (ಸಂಗ್ರಹ ಚಿತ್ರ)

   

ಕೋಲ್ಕತ್ತ: ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ‘ಆಯ್ದ ಆಟಗಾರರಿಗೆ’ ಶಿಬಿರದಲ್ಲಿ ಮಾರ್ಗದರ್ಶನ ನೀಡಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು, ದಿಗ್ಗಜ ಬೌಲರ್‌ ಹರಭಜನ್ ಸಿಂಗ್ ಅವರನ್ನು ಸಂಪರ್ಕಿಸಿದೆ.

ಈ ಮೊದಲು ಹಿರಿಯ ಎಡಗೈ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ವೇಗದ ಬೌಲರ್‌ಗಳಿಗೆ ಹಮ್ಮಿಕೊಂಡಿರುವ ಶಿಬಿರಕ್ಕೆ ಮಾರ್ಗದರ್ಶನ ನೀಡಲು ಆಹ್ವಾನಿಸಲಾಗಿದ್ದು, ಅವರು ಈಗಾಗಲೇ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ADVERTISEMENT

ಭಾರತ ಸೀನಿಯರ್ ತಂಡದಲ್ಲಿ ಆಡಬಲ್ಲ ಸಾಮರ್ಥ್ಯ ಹೊಂದಿರುವ ಆಯ್ದ ಆಟಗಾರರ ಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದೆ. ವಯೋವರ್ಗ ಟೂರ್ನಿಗಳಲ್ಲಿ, ಪ್ರಥಮ ದರ್ಜೆ ಪಂದ್ಯಗಳಲ್ಲಿ, ಭಾರತ ಎ ಮತ್ತು ಸೀನಿಯರ್ ತಂಡಕ್ಕೂ ಆಡಿದ ಕೆಲವು ಆಟಗಾರರನ್ನು ಗುರುತಿಸಿ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ.

ಇಂಥ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳವುದಕ್ಕಾಗಿ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥ ವಿ.ವಿ.ಎಸ್‌. ಲಕ್ಷ್ಮಣ್ ಅವರು ತಮ್ಮ ಜೊತೆ ಆಡಿದ್ದ ಸಹ ಆಟಗಾರರನ್ನು ಸಂಪರ್ಕಿಸಿದ್ದರು.

‘ಲಕ್ಷ್ಮಣ್ ಅವರು ಜಹೀರ್‌, ಹರಭಜನ್ ಮತ್ತು ಅನಿಲ್ ಕುಂಬ್ಳೆ ಅವರನ್ನು ವಿಶೇಷ ಶಿಬಿರಗಳನ್ನು ನಡೆಸಲು ಲಕ್ಷ್ಮಣ್ ಸಂಪರ್ಕಿಸಿದ್ದರು. ‘ಭಜ್ಜಿ’ ಅವರು ಐದು ದಿನಗಳ ಶಿಬಿರಕ್ಕೆ ದಿನಾಂಕ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಆಫ್‌ ಸ್ಪಿನ್ನರ್‌ಗಳಿಗೆ ಮಾರ್ಗದರ್ಶನ ನೀಡುವ ಶಿಬಿರದ ಹೊಣೆ ವಹಿಸಲಿದ್ದಾರೆ’ ಎಂದು ಬಿಸಿಸಿಐನ ಮೂಲವೊಂದು ತಿಳಿಸಿದೆ.

ಅನಿಲ್ ಕುಂಬ್ಳೆ ಅವರಿಗೂ ‘ರಿಸ್ಟ್‌ ಸ್ಪಿನ್ನರ್‌’ಗಳಿಗೆ ಏರ್ಪಡಿಸುವ ಶಿಬಿರಕ್ಕೆ ಮಾರ್ಗದರ್ಶನ ನೀಡಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.