ADVERTISEMENT

ಬಾಕ್ಸಿಂಗ್ ಫೆಡರೇಷನ್‌ ಹಂಗಾಮಿ ಸಮಿತಿಗೆ ರಾಜೀನಾಮೆ

ಪಿಟಿಐ
Published 2 ಆಗಸ್ಟ್ 2025, 13:11 IST
Last Updated 2 ಆಗಸ್ಟ್ 2025, 13:11 IST
ಬಾಕ್ಸಿಂಗ್
ಬಾಕ್ಸಿಂಗ್   

ನವದೆಹಲಿ: ಮುಂಬರುವ ಭಾರತ ಬಾಕ್ಸಿಂಗ್ ಫೆಡರೇಷನ್‌ನ (ಬಿಎಫ್‌ಐ) ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಹಂಗಾಮಿ ಸಮಿತಿ ಅಧ್ಯಕ್ಷ ಅಜಯ್‌ ಸಿಂಗ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವರ್ಲ್ಡ್‌ ಬಾಕ್ಸಿಂಗ್ ಅಧ್ಯಕ್ಷ ಬೋರಿಸ್‌ ವಾನ್‌ ಡರ್‌ ಫೋರ್ಸ್ಟ್‌ ಅವರು ಚುನಾವಣೆಗೆ ವೀಕ್ಷಕರಾಗಿ ಉಪಸ್ಥಿತರಿರಲಿದ್ದಾರೆ.

ಹಂಗಾಮಿ ಸಮಿತಿ ಶುಕ್ರವಾರ ಪ‍ದಾಧಿಕಾರಿಗಳ ಚುನಾವಣಾ ದಿನಾಂಕವನ್ನು ಆಗಸ್ಟ್‌ 21ಕ್ಕೆ ನಿಗದಿಪಡಿಸಿದ ಮರುದಿನವೇ ಅವರು ರಾಜೀನಾಮೆ ನೀಡಿದ್ದಾರೆ.

ADVERTISEMENT

‘ನಾನು ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ಹೋಂದಿರುವುದರಿಂದ, ಹಿತಾಸಕ್ತಿ ಸಂಘರ್ಷ ತ‍ಪ್ಪಿಸಲು ಮತ್ತು ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ನನ್ನ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ವಾನ್‌ ಡರ್‌ ಫೋರ್ಸ್ಟ್‌ ಅವರಿಗೆ ಉದ್ದೇಶಿಸಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಏಪ್ರಿಲ್‌ 10ರಂದು ಹಂಗಾಮಿ ಸಮಿತಿಯನ್ನು ವರ್ಲ್ಡ್‌ ಬಾಕ್ಸಿಂಗ್ ರಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.