ADVERTISEMENT

ಎಜಾಜ್ ಪಟೇಲ್ 10 ವಿಕೆಟ್ ಪಡೆದ ಚೆಂಡಿಗೆ ಎಂಸಿಎ ಮ್ಯೂಸಿಯಂನಲ್ಲಿ ವಿಶೇಷ ಸ್ಥಾನ

ಪಿಟಿಐ
Published 17 ಡಿಸೆಂಬರ್ 2021, 20:54 IST
Last Updated 17 ಡಿಸೆಂಬರ್ 2021, 20:54 IST
ಎಜಾಜ್ ಪಟೇಲ್
ಎಜಾಜ್ ಪಟೇಲ್   

ಮುಂಬೈ: ನ್ಯೂಜಿಲೆಂಡ್ ತಂಡದ ಸ್ಪಿನ್ ಬೌಲರ್ ಎಜಾಜ್ ಪಟೇಲ್ ಈಚೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ 10 ವಿಕೆಟ್ ಪಡೆದ ಚೆಂಡನ್ನು ಮುಂಬೈ ಕ್ರಿಕೆಟ್ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿ ವಿಶೇಷ ಸ್ಥಾನಮಾನದೊಂದಿಗೆ ಇರಿಸಲಾಗುವುದು ಎಂದು ಅಧ್ಯಕ್ಷ ವಿಜಯ್ ಪಾಟೀಲತಿಳಿಸಿದ್ದಾರೆ.

‘ಪಟೆಲ್ ಅವರ ಸಾಧನೆಯು ಅಮೋಘವಾದದ್ದು. ವಾಂಖೆಡೆ ಕ್ರೀಡಾಂಗಣದ ಗರಿಮೆಯಾಗಿ ಈ ಸಾಧನೆಯು ಸೇರ್ಪಡೆಗೊಂಡಿದೆ. ಪ್ರೈಡ್ ಆಫ್ ದ ಪ್ಲೇಸ್ ಗೌರವದೊಂದಿಗೆ ಆ ಚೆಂಡನ್ನು ಇಲ್ಲಿ ಕಾಪಿಡಲಾಗುವುದು. ಭವಿಷ್ಯದ ಆಟಗಾರರಿಗೆ ಇದು ಪ್ರೇರಣೆಯಾಗಿರಲಿದೆ’ ಎಂದು ತಿಳಿಸಿದ್ದಾರೆ.

ಜಿಮ್ ಲೇಖರ್ ಮತ್ತು ಅನಿಲ್ ಕುಂಬ್ಳೆಯವರ ನಂತರ ಇನಿಂಗ್ಸ್‌ವೊಂದರಲ್ಲಿ ಹತ್ತು ವಿಕೆಟ್ ಸಾಧನೆ ಮಾಡಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಟೇಲ್ ಪಾತ್ರರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.