ADVERTISEMENT

ಕ್ರಿಕೆಟ್‌ನಲ್ಲಿ ನಮಸ್ಕಾರದ ಕಾಲ!: ಅಜಿಂಕ್ಯ ರಹಾನೆ

ಏಜೆನ್ಸೀಸ್
Published 8 ಮೇ 2020, 15:07 IST
Last Updated 8 ಮೇ 2020, 15:07 IST
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ   

ನವದೆಹಲಿ: ಕ್ರಿಕೆಟ್‌ನಲ್ಲಿ ಇನ್ನು ಮುಂದೆ ಹಸ್ತಲಾಘವ ಹಾಗೂ ಹೈಫೈವ್ ಸ್ಥಾನವನ್ನು ನಮಸ್ತೆ ಮತ್ತುಚಪ್ಪಾಳೆಗಳು ತುಂಬಲಿವೆ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

‘ಕೊರೊನಾ ವೈರಸ್‌ ಹತೋಟಿಗೆ ಬಂದ ನಂತರ ಕ್ರಿಕೆಟ್‌ ವೈಭವ ಮರುಕಳಿಸುವುದು ಖಚಿತ. ಆದರೆ ಮುಂಜಾಗ್ರತೆಗಾಗಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ಅದರಲ್ಲಿ ಆಟಗಾರರು, ಸಿಬ್ಬಂದಿಯು ಕೈಕುಲುಕುವುದನ್ನು ಬಿಡಬಹುದು. ಎರಡೂ ಕೈಜೋಡಿಸಿ ನಮಸ್ಕಾರ ಮಾಡಿ ಅಭಿನಂದಿಸುವ ರೂಢಿಯಾಗಬಹುದು. ಸಂಭ್ರಮಿಸುವ ಸಂದರ್ಭದಲ್ಲಿ ಪರಸ್ಪರ ಆಟಗಾರರು ತಮ್ಮ ಕೈಗಳನ್ನು ಹೈಫೈವ್ ಮಾಡುವುದನ್ನು ಬಿಟ್ಟು ಚಪ್ಪಾಳೆ ತಟ್ಟುತ್ತಾರೆ’ ಎಂದು ರಹಾನೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT