ADVERTISEMENT

ICC Womens World Cup | AUS vs NZ: ಎಲಿಸ್, ತಹಿಲಾ, ಆ್ಯಶ್ಲಿ ಆಲ್‌ರೌಂಡ್ ಆಟ

ಮಹಿಳೆಯರ ವಿಶ್ವಕಪ್‌ ಟೂರ್ನಿ: ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಗೆಲುವು

ಪಿಟಿಐ
Published 13 ಮಾರ್ಚ್ 2022, 18:48 IST
Last Updated 13 ಮಾರ್ಚ್ 2022, 18:48 IST
ಆ್ಯಶ್ಲಿ ಗಾರ್ಡನರ್ –ಎಎಫ್‌ಪಿ ಚಿತ್ರ
ಆ್ಯಶ್ಲಿ ಗಾರ್ಡನರ್ –ಎಎಫ್‌ಪಿ ಚಿತ್ರ   

ವೆಲಿಂಗ್ಟನ್‌: ಎಲಿಸ್ ಪೆರಿ, ತಹಿಲಾ ಮೆಗ್ರಾ ಮತ್ತು ಆ್ಯಶ್ಲಿ ಗಾರ್ಡನರ್ ಆಲ್‌ರೌಂಡ್ ಆಟದ ಮೂಲಕ ಮಿಂಚಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿತು.

ನ್ಯೂಜಿಲೆಂಡ್ ವಿರುದ್ಧ ಭಾನುವಾರ ನಡೆದ ಹಣಾಹಣಿಯಲ್ಲಿ 141 ರನ್‌ಗಳ ಜಯ ಗಳಿಸಿದ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆರಿತು. ಇದು ತಂಡದ ಸತತ ಮೂರನೇ ಜಯವಾಗಿದೆ.

ಎಲಿಸ್ ಮತ್ತು ತಹಿಲಾ ಕ್ರಮವಾಗಿ 68 ಮತ್ತು 57 ರನ್ ಗಳಿಸಿ ಮಿಂಚಿದರು. ಗಾರ್ಡನರ್ 18 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ 48 ರನ್ ಸಿಡಿಸಿದರು. ಹೀಗಾಗಿ ತಂಡ 269 ರನ್ ಗಳಿಸಿತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 30.2 ಓವರ್‌ಗಳಲ್ಲಿ 128 ರನ್‌ಗಳಿಗೆ ಪತನ ಕಂಡಿತು. ಡಾರ್ಸಿ ಬ್ರೌನ್, ಗಾರ್ಡನರ್ ಮತ್ತು ಪೆರಿ ಬೌಲಿಂಗ್‌ಗೆ ನ್ಯೂಜಿಲೆಂಡ್ ಬ್ಯಾಟರ್‌ಗಳು ನಿರುತ್ತರರಾದರು.

ADVERTISEMENT

ಆಸ್ಟ್ರೇಲಿಯಾ ಬೌಲರ್‌ಗಳು ಆರಂಭದಿಂದಲೇ ನ್ಯೂಜಿಲೆಂಡ್ ತಂಡವನ್ನು ಕಾಡಿದರು. ಹೀಗಾಗಿ ಬ್ಯಾಟರ್‌ಗಳಿಗೆ ಯಾವ ಹಂತದಲ್ಲೂ ಪ್ರತಿರೋಧ ಒಡ್ಡಲು ಆಗಲಿಲ್ಲ. ಆ್ಯಮಿ ಸಟೆರ್ಥ್‌ವೇಟ್ ಮಾತ್ರ 44 ರನ್ ಗಳಿಸಿ ಸ್ವಲ್ಪ ಪ್ರತಿರೋಧ ಒಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.