ADVERTISEMENT

ಮಹಿಳೆಯರ ಟಿ20 ವಿಶ್ವಕಪ್ | ಸ್ಕಾಟ್ಲೆಂಡ್ ಮೇಲೆ ದಕ್ಷಿಣ ಆಫ್ರಿಕಾ ಸವಾರಿ

ಪಿಟಿಐ
Published 9 ಅಕ್ಟೋಬರ್ 2024, 15:24 IST
Last Updated 9 ಅಕ್ಟೋಬರ್ 2024, 15:24 IST
<div class="paragraphs"><p>ಮರಿಝಾನ್ ಕ್ಯಾಪ್</p></div>

ಮರಿಝಾನ್ ಕ್ಯಾಪ್

   

ದುಬೈ:ಎಲ್ಲ ವಿಭಾಗಗಳಲ್ಲಿ ಪ್ರಾಬಲ್ಯ ಸಾದಿಸಿದ ದಕ್ಷಿಣ ಆಫ್ರಿಕಾ ತಂಡ ಮಹಿಳೆಯರ ಟಿ20 ವಿಶ್ವಕಪ್ ಪಂದ್ಯದಲ್ಲಿ ಬುಧವಾರ ಸ್ಕಾಟ್ಲೆಂಡ್ ತಂಡದ ಮೇಲೆ 80 ರನ್‌ಗಳ ಅಧಿಕಾರಯುತ ಜಯ ಪಡೆಯಿತು.

ಮೊದಲು ಆಡಿದ ದಕ್ಷಿಣ ಆಫ್ರಿಕಾ 20 ಓವರುಗಳಲ್ಲಿ 5 ವಿಕೆಟ್‌ಗೆ 166 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಉತ್ತರವಾಗಿ ಸ್ಕಾಟ್‌ ವನಿತೆಯರು 17.5 ಓವರುಗಳಲ್ಲಿ 86 ರನ್‌ಗಳಿಗೆ ಪತನಗೊಂಡರು. ಇಬ್ಬರಿಗಷ್ಟೇ ಎರಡಂಕಿ ಮೊತ್ತ ಗಳಿಸಲು ಸಾಧ್ಯವಾಯಿತು.

ADVERTISEMENT

ಎಡಗೈ ಸ್ಪಿನ್ನರ್‌ ನೊನ್‌ಕುಲುಲೆಕೊ ಮ್ಲಾಬಾ (12ಕ್ಕೆ3) ದಕ್ಷಿಣ ಆಫ್ರಿಕಾ ಕಡೆ ಯಶಸ್ವಿ ಬೌಲರ್ ಎನಿಸಿದರೆ, ಕ್ಲೋಯೆ ಟ್ರಯಾನ್ ಮತ್ತು ನಾಡಿನ್ ಡಿ ಕ್ಲಾರ್ಕ್ ತಲಾ ಎರಡು ವಿಕೆಟ್ ಪಡೆದು ಎದುರಾಳಿಗಳ ಸದ್ದಡಗಿಸಿದರು.

ಮೂರು ಪಂದ್ಯಗಳಲ್ಲಿ ಎರಡನೇ ಗೆಲುವಿನೊಡನೆ ದಕ್ಷಿಣ ಆಫ್ರಿಕಾ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ಸ್ಕಾಟ್ಲೆಂಡ್ ಕೊನೆಯ ಸ್ಥಾನದಲ್ಲಿ ನೆಲೆಸಿದೆ.

ಲೋರಾ ವೊಲ್ವಾರ್ಟ್ (40, 27ಎ) ಮತ್ತು ತಾಜ್ಮಿನ್ ಬ್ರಿಟ್ಸ್ (43, 35ಎ) ಅವರು ದಕ್ಷಿಣ ಆಫ್ರಿಕಕ್ಕೆ 7.3 ಓವರುಗಳಲ್ಲಿ 64 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಮರಿಝಾನ್ ಕ್ಯಾಪ್ 24 ಎಸೆತಗಳಲ್ಲಿ 43 ರನ್ ಸೇರಿಸಿ ರನ್ ವೇಗ ಏರಿಸಿದರು. ಅವರ ಆಟದಲ್ಲಿ ಆರು ಬೌಂಡರಿಗಳಿದ್ದವು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 20 ಓವರುಗಳಲ್ಲಿ 5 ವಿಕೆಟ್‌ಗೆ 166 (ಲೋರಾ ವೋಲ್ವಾರ್ಟ್‌ 40, ತಾಜ್ಮಿನ್ ಬ್ರಿಟ್ಸ್ 43, ಮರಿಝಾನ್ ಕ್ಯಾಪ್ 43); ಸ್ಕಾಟ್ಲೆಂಡ್‌: 17.5 ಓವರುಗಳಲ್ಲಿ 86 (ನೊನ್‌ಕುಲುಲೆಕೊ ಮ್ಲಾಬಾ 12ಕ್ಕೆ3, ಕ್ಲೋಯೆ ಟ್ರಯಾನ್ 22ಕ್ಕೆ2, ನಾಡಿನ್ ಡಿ ಕ್ಲಾರ್ಕ್ 15ಕ್ಕೆ2). ಪಂದ್ಯದ ಆಟಗಾರ್ತಿ: ಮರಿಝಾನ್ ಕ್ಯಾಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.