ADVERTISEMENT

IPL 2021: ರಾಜಸ್ಥಾನ್‌ ಶಿಬಿರ ತೊರೆದ ಆ್ಯಂಡ್ರೂ ಟೈ

ಪಿಟಿಐ
Published 25 ಏಪ್ರಿಲ್ 2021, 22:12 IST
Last Updated 25 ಏಪ್ರಿಲ್ 2021, 22:12 IST
ಆ್ಯಂಡ್ರೂ ಟೈ (ಬಲ)–ಪಿಟಿಐ ಚಿತ್ರ
ಆ್ಯಂಡ್ರೂ ಟೈ (ಬಲ)–ಪಿಟಿಐ ಚಿತ್ರ   

ಮುಂಬೈ: ಆಸ್ಟ್ರೇಲಿಯಾ ವೇಗಿ ಆ್ಯಂಡ್ರೂ ಟೈ ಅವರು ವೈಯಕ್ತಿಕ ಕಾರಣ ನೀಡಿ ರಾಜಸ್ಥಾನ ರಾಯಲ್ಸ್ ತಂಡದ ಶಿಬಿರ ತೊರೆದಿದ್ದು, ಸ್ವದೇಶಕ್ಕೆ ಮರಳಿದ್ದಾರೆ. ಇದರೊಂದಿಗೆ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ ತಂಡದ ನಾಲ್ಕನೇ ವಿದೇಶಿ ಆಟಗಾರ ತಂಡವನ್ನು ತೊರೆದಂತಾಗಿದೆ.

ಈ ಹಿಂದೆ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್‌ (ಕೈಗೆ ಶಸ್ತ್ರಚಿಕಿತ್ಸೆ), ಬೆನ್ ಸ್ಟೋಕ್ಸ್ (ಬೆರಳಿಗೆ ಗಾಯ) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್‌ (ಬಯೋಬಬಲ್‌ ತೊಂದರೆ) ರಾಜಸ್ಥಾನ ಶಿಬಿರದಿಂದ ಹಿಂದೆ ಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT