ADVERTISEMENT

ಹಿಮ್ಮಡಿ ಗಾಯ: ಐಪಿಎಲ್‌ ಟೂರ್ನಿಯಿಂದ ಆಸ್ಟ್ರೇಲಿಯಾ ಆಟಗಾರ ಹೊರಕ್ಕೆ

ಮಾರ್ಷ್‌ ಸ್ಥಾನಕ್ಕೆ ಹೋಲ್ಡರ್‌

ಪಿಟಿಐ
Published 23 ಸೆಪ್ಟೆಂಬರ್ 2020, 14:17 IST
Last Updated 23 ಸೆಪ್ಟೆಂಬರ್ 2020, 14:17 IST
ಮಿಚೆಲ್ ಮಾರ್ಷ್‌–ಪಿಟಿಐ ಚಿತ್ರ
ಮಿಚೆಲ್ ಮಾರ್ಷ್‌–ಪಿಟಿಐ ಚಿತ್ರ   

ದುಬೈ: ಹಿಮ್ಮಡಿ ಗಾಯದಿಂದ ಬಳಲುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಅವರು ಐಪಿಎಲ್‌ ಕ್ರಿಕೆಟ್‌ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ವೆಸ್ಟ್‌ ಇಂಡೀಸ್‌ನ ಜೇಸನ್‌ ಹೋಲ್ಡರ್‌ ಹೈದರಾಬಾದ್‌ ತಂಡ ಸೇರಿಕೊಳ್ಳಲಿದ್ದಾರೆ.

ಹೈದರಾಬಾದ್‌ ತಂಡವುರಾಯಲ್‌ ಚಾಲೆಂಜರ್ಸ್ ಬೆಂಗಳೂರು ಎದುರು ಆಡಿದ ಪಂದ್ಯದಲ್ಲಿ ಮಾರ್ಷ್‌ ಗಾಯಗೊಂಡಿದ್ದರು. ಅವರ ಬದಲಿಗೆ ಜೇಸನ್‌ ಹೋಲ್ಡರ್‌ ಯುಎಇಯಲ್ಲಿರುವ ತಂಡವನ್ನುಶೀಘ್ರವೇ ಸೇರಿಕೊಳ್ಳಲಿದ್ದಾರೆ.

‘ಮಿಚೆಲ್‌ ಮಾರ್ಷ್‌ ಗಾಯದ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರು ಬೇಗ ಗುಣಮುಖರಾಗಲಿ. ಅವರ ಸ್ಥಾನವನ್ನು ಹೋಲ್ಡರ್ ತುಂಬಲಿದ್ದಾರೆ’ ಎಂದು ಸನ್‌ರೈಸರ್ಸ್‌ ಹೈದರಾಬಾದ್‌ ಟ್ವೀಟ್‌ ಮಾಡಿದೆ.

ADVERTISEMENT

ಆಸ್ಟ್ರೇಲಿಯಾದ ಮಿಚೆಲ್‌ ಮಾರ್ಷ್‌ ಅವರು ಐಪಿಎಲ್‌ ಟೂರ್ನಿಯಿಂದ ಹೊರಗುಳಿಯುತ್ತಿರುವುದು ಇದು ಎರಡನೇ ಬಾರಿ. 2017ರ ಟೂರ್ನಿಯಲ್ಲಿ ಅವರು ಭುಜದ ನೋವಿನ ಕಾರಣ ನಿರ್ಗಮಿಸಿದ್ದರು.

ವೆಸ್ಟ್‌ ಇಂಡೀಸ್‌ ತಂಡದ ನಾಯಕ‌ ಹೋಲ್ಡರ್ ಅವರು 2014–15ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಮೊದಲ ಬಾರಿ ಕಣಕ್ಕಿಳಿದಿದ್ದರು. 2016ರಲ್ಲಿ ಕೊನೆಯ ಬಾರಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿ ಆಡಿದ್ದರು. ಇತ್ತೀಚೆಗೆ ಕೊನೆಗೊಂಡ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೂ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.