ADVERTISEMENT

ಆ್ಯಷಸ್‌ ಟೆಸ್ಟ್‌: ಇಂಗ್ಲೆಂಡ್‌ಗೆ ರೂಟ್‌, ಬಟ್ಲರ್‌ ಆಸರೆ

ಏಜೆನ್ಸೀಸ್
Published 12 ಸೆಪ್ಟೆಂಬರ್ 2019, 20:15 IST
Last Updated 12 ಸೆಪ್ಟೆಂಬರ್ 2019, 20:15 IST
ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಮಾರ್ಷ್ ಅವರು ಇಂಗ್ಲೆಂಡ್‌ನ ಸ್ಯಾಮ್ ಕರನ್ ವಿಕೆಟ್ ಗಳಿಸಿದ ಸಂಭ್ರಮಿಸಿದರು  –ರಾಯಿಟರ್ಸ್ ಚಿತ್ರ
ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಮಾರ್ಷ್ ಅವರು ಇಂಗ್ಲೆಂಡ್‌ನ ಸ್ಯಾಮ್ ಕರನ್ ವಿಕೆಟ್ ಗಳಿಸಿದ ಸಂಭ್ರಮಿಸಿದರು –ರಾಯಿಟರ್ಸ್ ಚಿತ್ರ   

ಲಂಡನ್:ಬಲಗೈ ವೇಗಿ ಪ್ಯಾಟ್ ಕಮಿನ್ಸ್‌ ಮತ್ತು ಮಿಚೆಲ್ ಮಾರ್ಷ್ ಅವರ ದಾಳಿಗೆ ತತ್ತರಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ನಾಯಕ ಜೋ ರೂಟ್‌ (57; 141ಎ, 3ಬೌಂ) ಮತ್ತು ಜೋಸ್‌ ಬಟ್ಲರ್‌ (ಬ್ಯಾಟಿಂಗ್‌ 64; 84ಎ, 6ಬೌಂ, 3ಸಿ) ಆಸರೆಯಾದರು.

ಇವರು ಗಳಿಸಿದ ಅರ್ಧಶತಕಗಳ ಬಲದಿಂದ ಆತಿಥೇಯ ತಂಡವು ಆಸ್ಟ್ರೇಲಿಯಾ ಎದುರಿನ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಐದನೇ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಇಟ್ಟಿದ್ದಾರೆ.

ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್‌, ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 82 ಓವರ್‌ಗಳಲ್ಲಿ 8 ವಿಕೆಟ್‌ಗೆ 271ರನ್‌ ಕಲೆಹಾಕಿದೆ.

ADVERTISEMENT

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಾಳ್ಮೆಯ ಆಟವಾಡಿ ಉತ್ತಮ ಆರಂಭ ನೀಡುವತ್ತ ಹೆಜ್ಜೆಯಿಟ್ಟಿದ್ದ ಜೋ ಡೆನ್ಲಿ (14 ರನ್) ಅವರ ವಿಕೆಟ್‌ ಅನ್ನು ಒಂಬತ್ತನೇ ಓವರ್‌ನಲ್ಲಿ ಕಮಿನ್ಸ್‌ ಉರುಳಿಸಿದರು. ರೋರಿ ಬರ್ನ್ಸ್‌ (47) ಜೊತೆಗೂಡಿದ ರೂಟ್, ಎರಡನೇ ವಿಕೆಟ್‌ಗೆ 76 ರನ್‌ ಸೇರಿಸಿದರು. ಈ ಜೊತೆಯಾಟವನ್ನು 31ನೇ ಓವರ್ ಬೌಲ್‌ ಮಾಡಿದ ಜೋಶ್ ಹೇಜಲ್‌ವುಡ್ ಮುರಿದರು. ಅಮೋಘ ಕ್ಯಾಚ್ ಪಡೆದ ಮಿಚೆಲ್ ಮಾರ್ಷ್ ಮಿಂಚಿದರು. ‌ತಾಳ್ಮೆಯಿಂದ ಆಡುತ್ತಿದ್ದ ರೂಟ್ ವಿಕೆಟ್ ಕಬಳಿಸಿದ ಕಮಿನ್ಸ್‌ ಕೇಕೆ ಹಾಕಿದರು. ಬಳಿಕ ಬಟ್ಲರ್ ಎಚ್ಚರಿಕೆಯ ಇನಿಂಗ್ಸ್‌ ಕಟ್ಟಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 82 ಓವರ್‌ಗಳಲ್ಲಿ 8 ವಿಕೆಟ್‌ಗೆ 271 (ರೋರಿ ಬರ್ನ್ಸ್‌ 47, ಜೋ ಡೆನ್ಲಿ 14, ಜೋ ರೂಟ್ 57, ಬೆನ್ ಸ್ಟೋಕ್ಸ್‌ 20, ಜಾನಿ ಬೆಸ್ಟೊ 22, ಜೋಸ್ ಬಟ್ಲರ್ ಬ್ಯಾಟಿಂಗ್ 64, ಸ್ಯಾಮ್ ಕರನ್ 15, ಜಾಕ್‌ ಲೀಚ್‌ ಬ್ಯಾಟಿಂಗ್ 10, ಪ್ಯಾಟ್ ಕಮಿನ್ಸ್‌ 73ಕ್ಕೆ2, ಜೋಶ್ ಹೇಜಲ್‌ವುಡ್ 76ಕ್ಕೆ2 ಮಿಚೆಲ್ ಮಾರ್ಷ್ 35ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.