ADVERTISEMENT

ಜೋಫ್ರಾ ಆರ್ಚರ್‌ ಬಿರುಗಾಳಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:00 IST
Last Updated 22 ಆಗಸ್ಟ್ 2019, 20:00 IST

ಹೆಡಿಂಗ್ಲೆ, ಲೀಡ್ಸ್‌: ಇಂಗ್ಲೆಂಡ್‌ನ ಜೋಫ್ರಾ ಆರ್ಚರ್‌ (45ಕ್ಕೆ6) ಅವರ ಬಿರುಗಾಳಿ ವೇಗದ ದಾಳಿಗೆ ಗುರುವಾರ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ಗಳು ತರಗೆಲೆಗಳ ಹಾಗೆ ಉದುರಿಹೋದರು.

ಇದರ ಪರಿಣಾಮ ಆ್ಯಷಸ್‌ ಟೆಸ್ಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಟಿಮ್‌ ‍ಪೇನ್‌ ಬಳಗವು ಅಲ್ಪ ಮೊತ್ತಕ್ಕೆ ಕುಸಿಯಿತು.

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ, ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 52.1 ಓವರ್‌ಗಳಲ್ಲಿ 179ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

ADVERTISEMENT

ಡೇವಿಡ್‌ ವಾರ್ನರ್‌ (61; 94ಎ, 7ಬೌಂ) ಮತ್ತು ಮಾರ್ನಸ್‌ ಲಾಬುಚಾನ್‌ (74; 129ಎ, 10ಬೌಂ) ಅರ್ಧಶತಕ ಸಿಡಿಸಿ ಪ್ರವಾಸಿ ಪಡೆಯ ಇನಿಂಗ್ಸ್‌ಗೆ ರಂಗು ತುಂಬಲು ಪ್ರಯತ್ನಿಸಿದರು. ಇವರಿಗೆ ಉಳಿದವರಿಂದ ಸೂಕ್ತ ಬೆಂಬಲ ಸಿಗಲಿಲ್ಲ.

ಪೇನ್‌ ಪಡೆಯ ನಾಲ್ಕು ಮಂದಿ ಒಂದಂಕಿ ಮೊತ್ತ ಗಳಿಸಿ ಪೆವಿಲಿಯನ್‌ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಬೇಕಿದ್ದ ಟ್ರಾವಿಸ್‌ ಹೆಡ್‌ ಮತ್ತು ಮ್ಯಾಥ್ಯೂ ವೇಡ್‌ ಶೂನ್ಯಕ್ಕೆ ಔಟಾದರು. ಪ್ಯಾಟ್‌ ಕಮಿನ್ಸ್‌ ಕೂಡ ಸೊನ್ನೆ ಸುತ್ತಿದರು. ಅವರು 13 ಎಸೆತಗಳನ್ನು ಎದುರಿಸಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ; ಪ್ರಥಮ ಇನಿಂಗ್ಸ್‌: 52.1 ಓವರ್‌ಗಳಲ್ಲಿ 179 (ಡೇವಿಡ್‌ ವಾರ್ನರ್‌ 61, ಮಾರ್ನಸ್‌ ಲಾಬುಚಾನ್‌ 74, ಟಿಮ್‌ ಪೇನ್‌ 11; ಸ್ಟುವರ್ಟ್‌ ಬ್ರಾಡ್‌ 32ಕ್ಕೆ2, ಜೋಫ್ರಾ ಆರ್ಚರ್‌ 45ಕ್ಕೆ6, ಕ್ರಿಸ್‌ ವೋಕ್ಸ್‌ 51ಕ್ಕೆ1, ಬೆನ್‌ ಸ್ಟೋಕ್ಸ್‌ 45ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.