ADVERTISEMENT

ಗಾಬಾದಲ್ಲಿ ಆ್ಯಷಸ್ ಟ್ರೋಫಿ ಅನಾವರಣ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 20:15 IST
Last Updated 5 ಡಿಸೆಂಬರ್ 2021, 20:15 IST
ಆ್ಯಷಸ್ ಟ್ರೋಫಿಯೊಂದಿಗೆ ಪ್ಯಾಟ್ ಕಮಿನ್ಸ್ ಮತ್ತು ಜೋ ರೂಟ್  –ಎಪಿ/ಪಿಟಿಐ ಚಿತ್ರ
ಆ್ಯಷಸ್ ಟ್ರೋಫಿಯೊಂದಿಗೆ ಪ್ಯಾಟ್ ಕಮಿನ್ಸ್ ಮತ್ತು ಜೋ ರೂಟ್  –ಎಪಿ/ಪಿಟಿಐ ಚಿತ್ರ   

ಬ್ರಿಸ್ಬೇನ್(ಎಎಫ್‌ಪಿ): ಗಾಬಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ನಡೆಯುವ ಈ ಸರಣಿಯ ಮೊದಲ ಪಂದ್ಯವು ಬುಧವಾರ ಇಲ್ಲಿ ಆರಂಭವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ‘ಹೋದ ವರ್ಷ ಇಲ್ಲಿ ಭಾರತ ತಂಡವು ಟೆಸ್ಟ್ ಗೆದ್ದಿತ್ತು. ಭಾರತದ ಆಟಗಾರರು ಅಮೋಘವಾಗಿ ಆಡಿದ್ದರು. ಆ ಗೆಲುವು ಎಲ್ಲ ಪ್ರವಾಸಿ ತಂಡಗಳಿಗೂ ಸ್ಫೂರ್ತಿದಾಯಕವಾಗಿದೆ‘ ಎಂದರು.

ADVERTISEMENT

ಆಸ್ಟ್ರೇಲಿಯಾ ತಂಡದ ನೂತನ ನಾಯಕ ಪ್ಯಾಟ್ ಕಮಿನ್ಸ್‌ ಮತ್ತು ರೂಟ್ ಅವರು ಆ್ಯಷಸ್ ಟ್ರೋಫಿ ಪ್ರದರ್ಶಿಸಿದರು.

ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ 2011ರಲ್ಲಿ ಆ್ಯಷಸ್ ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.