ADVERTISEMENT

ತೆಂಡೂಲ್ಕರ್‌ ಬ್ಯಾಟ್‌ ದುರಸ್ತಿ ಮಾಡುತ್ತಿದ್ದ ಅಶ್ರಫ್‌ಗೆ ಕೋವಿಡ್

ಪಿಟಿಐ
Published 5 ಸೆಪ್ಟೆಂಬರ್ 2020, 7:49 IST
Last Updated 5 ಸೆಪ್ಟೆಂಬರ್ 2020, 7:49 IST
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್   

ಮುಂಬೈ: ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ಬ್ಯಾಟ್ ರಿಪೇರಿ ಮಾಡಿಕೊಡುತ್ತಿದ್ದ ಅಶ್ರಫ್ ಚೌಧರಿಗೆ ಕೋವಿಡ್–19 ಸೋಂಕು ತಗುಲಿರುವುದು ಖಚಿತವಾಗಿದೆ.

ಅವರು ಕ್ರಿಕೆಟಿಗರ ವಲಯದಲ್ಲಿ ಅಶ್ರಫ್ ಚಾಚಾ ಎಂದೇ ಚಿರಪರಿಚಿತರಾಗಿದ್ದಾರೆ. 60 ವರ್ಷ ವಯಸ್ಸಿನ ಅವರನ್ನು ಚೆಂಬೂರಿನಲ್ಲಿರುವ ಉಪನಗರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಸಚಿನ್ ತೆಂಡೂಲ್ಕರ್ ಮನವಿ ಮೇರೆಗೆ ಸೆವೆನ್ ಹಿಲ್ಸ್‌ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

‘ಅಶ್ರಫ್ ಅವರಿಗೆ ಕೋವಿಡ್ –19 ಇರುವುದು ಖಚಿತವಾಗಿದೆ. ತೆಂಡೂಲ್ಕರ್ ನನ್ನೊಂದಿಗೆ ಚರ್ಚಿಸಿದ್ದಾರೆ. ಅಶ್ರಫ್ ಅವರನ್ನು ಸೆವೆನ್ ಹಿಲ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಿ ಉತ್ತಮ ಚಿಕಿತ್ಸೆ ನೀಡಲು ಮನವಿ ಮಾಡಿಕೊಂಡಿದ್ದರು. ಅವರನ್ನು ಸವೆನ್‌ ಹಿಲ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಭುಜಂಗ್ ಪೈ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.