ADVERTISEMENT

ನಿಧಾನಗತಿ ಬೌಲಿಂಗ್‌: ಅಶ್ವಿನ್‌ಗೆ ₹12 ಲಕ್ಷ ದಂಡ

ಪಿಟಿಐ
Published 21 ಏಪ್ರಿಲ್ 2019, 20:15 IST
Last Updated 21 ಏಪ್ರಿಲ್ 2019, 20:15 IST
ರವಿಚಂದ್ರನ್‌ ಅಶ್ವಿನ್
ರವಿಚಂದ್ರನ್‌ ಅಶ್ವಿನ್   

ನವದೆಹಲಿ: ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದ ವೇಳೆ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ತನ್ನ ಪಾಲಿನ ಓವರ್‌ಗಳನ್ನು ಪೂರೈಸಲು ನಿಗದಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡ ಕಾರಣ ನಾಯಕ ರವಿಚಂದ್ರನ್‌ ಅಶ್ವಿನ್‌ಗೆ ₹12 ಲಕ್ಷ ದಂಡ ವಿಧಿಸಲಾಗಿದೆ.

‘ಐಪಿಎಲ್‌ ನಿಯಮಾವಳಿ ಪ್ರಕಾರ, ಈ ಆವೃತ್ತಿಯಲ್ಲಿ ಕಿಂಗ್ಸ್‌ ಪಂಜಾಬ್‌ ತಂಡದ ಮೊದಲ ತಪ್ಪು ಇದಾಗಿದೆ. ಈ ಕಾರಣಕ್ಕಾಗಿ ಅಶ್ವಿನ್‌ ಅವರಿಗೆ ₹12ಲಕ್ಷ ದಂಡ ವಿಧಿಸಲಾಗಿದೆ’ ಎಂದು ಐಪಿಎಲ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿಧಾನಗತಿ ಬೌಲಿಂಗ್‌ ಕಾರಣಕ್ಕಾಗಿ ದಂಡ ತೆತ್ತ ನಾಯಕರಲ್ಲಿ ಅಶ್ವಿನ್‌ ಅವರು ನಾಲ್ಕನೇಯವರು. ಮುಂಬೈ ಇಂಡಿಯನ್ಸ್‌ನ ರೋಹಿತ್‌ ಶರ್ಮಾ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರಾಟ್‌ ಕೊಹ್ಲಿ ಹಾಗೂ ರಾಜಸ್ಥಾನ ರಾಯಲ್ಸ್‌ನ ನಾಯಕ ಅಜಿಂಕ್ಯ ರಹಾನೆ ಅವರಿಗೂ ಈ ಹಿಂದೆ ದಂಡ ವಿಧಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.