ಟೀಮ್ ಇಂಡಿಯಾ
ದುಬೈ: ಭಾರತ ತಂಡದ ಆಟಗಾರರು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿಯೂ ಪಾಕಿಸ್ತಾನದ ಆಟಗಾರರಿಗೆ ಹಸ್ತಲಾಘವ ನೀಡಲಿಲ್ಲ.
ಹೋದ ವಾರ ಗುಂಪು ಹಂತದ ಪಂದ್ಯದಲ್ಲಿಯೂ ಭಾರತದ ಆಟಗಾರರು ಪಾಕ್ ತಂಡದ ಆಟಗಾರರಿಗೆ ಕೈಕುಲುಕಿರಲಿಲ್ಲ. ಅದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಭಾನುವಾರ ನಡೆದ ಸೂಪರ್ ಫೋರ್ ಪಂದ್ಯದ ಟಾಸ್ ಸಂದರ್ಭದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರ ಕೈಕುಲುಕಿದರು. ಆದರೆ ಪಾಕ್ ತಂಡದ ನಾಯಕ ಸಲ್ಮಾನ್ ಆಘಾ ಅವರಿಗೆ ಹಸ್ತಲಾಘವ ನೀಡಲಿಲ್ಲ.
ಪಂದ್ಯ ಮುಗಿದ ನಂತರ ಪೆವಿಲಿಯನ್‌ನತ್ತ ಮರಳುವ ಹೊತ್ತಿನಲ್ಲಿ ಬ್ಯಾಟರ್‌ಗಳಾದ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರು ಪಾಕ್ ಆಟಗಾರರಿಗೆ ಹಸ್ತಲಾಘವ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.