ADVERTISEMENT

ಟೆಸ್ಟ್ ಕ್ರಿಕೆಟ್ | 2019ರಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ ಕಮಿನ್ಸ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 6:09 IST
Last Updated 2 ಡಿಸೆಂಬರ್ 2019, 6:09 IST
   

ದಿ ಓವಲ್‌(ಅಡಿಲೇಡ್‌): ಪಾಕಿಸ್ತಾನ ಎದುರಿನ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಕಬಳಿಸಿದ ಆಸ್ಟ್ರೇಲಿಯಾ ವೇಗಿ ಪ್ಯಾಟ್‌ ಕಮಿನ್ಸ್‌, ಈ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ 50ಕ್ಕಿಂತ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎನಿಸಿದರು.

ಕಮಿನ್ಸ್‌ ಈ ವರ್ಷ ಆಡಿರುವ 10 ಪಂದ್ಯಗಳ 19 ಇನಿಂಗ್ಸ್‌ಗಳಿಂದ ಒಟ್ಟು 51 ವಿಕೆಟ್‌ ಉರುಳಿಸಿದ್ದಾರೆ. ಇಷ್ಟೇ ಪಂದ್ಯ ಹಾಗೂ ಇನಿಂಗ್ಸ್‌ ಆಡಿರುವ ಇಂಗ್ಲೆಂಡ್‌ ವೇಗಿ ಸ್ಟುವರ್ಟ್‌ ಬ್ರಾಡ್‌ 38 ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಎಂಟು ಪಂದ್ಯಗಳ 16 ಇನಿಂಗ್ಸ್‌ನಿಂದ 33 ವಿಕೆಟ್‌ ಪಡೆದಿರುವ ಭಾರತದ ಮೊಹಮದ್‌ ಶಮಿ ಮೂರನೇ ಸ್ಥಾನದಲ್ಲಿದ್ದಾರೆ.

ಇಲ್ಲಿನ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಗೆಲುವಿನತ್ತ ದಾಪುಗಾಲಿಟ್ಟಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕ ಡೇವಿಡ್‌ ವಾರ್ನರ್‌ ತ್ರಿಶತಕ ಹಾಗುಮಾರ್ನಸ್‌ ಲಾಬುಚಾನ್‌ ಭರ್ಜರಿ ಶತಕದ ಬಲದಿಂದ ಕೇವಲ ಮೂರು ವಿಕೆಟ್‌ಗೆ 589 ರನ್‌ ಪೇರಿಸಿತ್ತು. ಈ ಮೊತ್ತದೆದುರು 302ರನ್‌ ಗಳಿಗೆ ಆಲೌಟ್‌ ಆಗಿದ್ದ ಪ್ರವಾಸಿ ಪಡೆ 287ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದೆ.

ADVERTISEMENT

ಆಸಿಸ್‌ ಬೌಲರ್‌ಗಳಪ್ರಾಬಲ್ಯದೆದುರು 171ರನ್‌ ಗಳಿಗೆ ಪ್ರಮುಖ 5 ವಿಕೆಟ್‌ ಕಳೆದುಕೊಂಡಿರುವ ಪಾಕ್‌, ಇನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಲು ಇನ್ನೂ 116ರನ್‌ ಗಳಿಸಬೇಕಿದೆ. ಮೊದಲ ಇನಿಂಗ್ಸ್‌ನಲ್ಲಿ ಬಾಬರ್‌ ಅಜಂ(97) ಹಾಗೂ ಯಾಸಿರ್‌ ಶಾ(113)ಆಸರೆಯಾಗಿದ್ದರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌:
127 ಓವರ್‌ಗಳಲ್ಲಿ3 ವಿಕೆಟ್‌ಗೆ 589
ಡೇವಿಡ್‌ ವಾರ್ನರ್‌ 335ಅಜೇಯ
ಮಾರ್ನಸ್‌ ಲಾಬುಚಾನ್‌ 162
ಶಾಹೀನ್‌ ಅಫ್ರಿದಿ 88ಕ್ಕೆ 3

ಪಾಕಿಸ್ತಾನ ಮೊದಲ ಇನಿಂಗ್ಸ್‌: 94.4 ಓವರ್‌ಗಳಲ್ಲಿ 302ಕ್ಕೆ ಆಲೌಟ್‌
ಯಾಸಿರ್‌ ಶಾ 113
ಬಾಬರ್‌ ಅಜಂ 97
ಮಿಚೇಲ್‌ ಸ್ಟಾರ್ಕ್‌ 66ಕ್ಕೆ 6
ಪ್ಯಾಟ್‌ ಕಮಿನ್ಸ್‌ 83ಕ್ಕೆ 3

ಪಾಕಿಸ್ತಾನ ಎರಡನೇ ಇನಿಂಗ್ಸ್‌: 55 ಓವರ್‌ಗಳಲ್ಲಿ 5ವಿಕೆಟ್‌ಗೆ 171
ಶಾನ್‌ ಮಸೂದ್‌ 68
ಅಸಾದ್‌ ಶಫಿಕ್‌ 57
ನಾಥನ್‌ ಲಿಯಾನ್ 49ಕ್ಕೆ 2
ಜೋಶ್‌ ಹ್ಯಾಷಲ್‌ವುಡ್‌ 50ಕ್ಕೆ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.