ADVERTISEMENT

ಆಸ್ಟ್ರೇಲಿಯಾ ಆಟಗಾರರೂ ಕ್ವಾರಂಟೈನ್‌ನಲ್ಲಿರಬೇಕು ಎಂದ ಎರಿಕ್‌ ಸಿಮನ್ಸ್‌

ಪಿಟಿಐ
Published 13 ಸೆಪ್ಟೆಂಬರ್ 2020, 10:47 IST
Last Updated 13 ಸೆಪ್ಟೆಂಬರ್ 2020, 10:47 IST
ಸ್ಟೀವನ್‌ ಸ್ಮಿತ್ (ಬಲ)‌ ಹಾಗೂ ಡೇವಿಡ್‌ ವಾರ್ನರ್‌–ಪಿಟಿಐ ಚಿತ್ರ
ಸ್ಟೀವನ್‌ ಸ್ಮಿತ್ (ಬಲ)‌ ಹಾಗೂ ಡೇವಿಡ್‌ ವಾರ್ನರ್‌–ಪಿಟಿಐ ಚಿತ್ರ   

ದುಬೈ: ಐಪಿಎಲ್‌ನಲ್ಲಿ ಆಡಲುಇಂಗ್ಲೆಂಡ್‌ನಿಂದ ಬರಲಿರುವ ಆಸ್ಟ್ರೇಲಿಯಾದ ಆಟಗಾರರುಯುಎಇಯಲ್ಲಿ ಆರು ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಬೌಲಿಂಗ್‌ ಸಲಹೆಗಾರ ಎರಿಕ್‌ ಸಿಮನ್ಸ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌ (ರಾಜಸ್ಥಾನ ರಾಯಲ್ಸ್), ಡೇವಿಡ್‌ ವಾರ್ನರ್‌ (ಸನ್‌ರೈಸರ್ಸ್‌ ಹೈದರಾಬಾದ್‌) ಹಾಗೂ ಜೋಶ್‌ ಹ್ಯಾಜಲ್‌ವುಡ್‌ (ಸಿಎಸ್‌ಕೆ) ಅವರು ಇಂಗ್ಲೆಂಡ್‌ ವಿರುದ್ಧ ಬುಧವಾರ ನಡೆಯಲಿರುವ ಮೂರನೇ ಏಕದಿನ ಪಂದ್ಯದ ಬಳಿಕ ನೇರವಾಗಿ ಯುಎಇಗೆ ತೆರಳಲಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅವರು ಜೀವಸುರಕ್ಷಾ ವಾತಾವರಣದಲ್ಲಿ ಪಂದ್ಯಗಳನ್ನು ಆಡುತ್ತಿದ್ದಾರೆ.

‘ಯಾರಿಗೂ ವಿನಾಯಿತಿ ಬೇಡ. ಆಯಾ ತಂಡದ ಶಿಬಿರಗಳನ್ನು ಸೇರುವ ಮೊದಲು ಆಸ್ಟ್ರೇಲಿಯಾ ಆಟಗಾರರು ತಮಗೆ ಒದಗಿಸಿದ ನಿವಾಸಗಳಲ್ಲಿ ಆರು ದಿನಗಳ ಕ್ವಾರಂಟೈನ್‌ ಪೂರ್ಣಗೊಳಿಸಬೇಕು. ಕೋವಿಡ್‌ ‘ನೆಗೆಟಿವ್‌‘ ಪ್ರಮಾಣಪತ್ರ ತೆಗೆದುಕೊಳ್ಳಬೇಕು‘ ಎಂದು ವೆಬ್‌ಸೈಟ್‌ವೊಂದಕ್ಕೆ ಬರೆದ ಅಂಕಣದಲ್ಲಿ‌ ಸಿಮನ್ಸ್ ಹೇಳಿದ್ದಾರೆ.

ADVERTISEMENT

ಆಸ್ಟ್ರೇಲಿಯಾ ಕ್ರಿಕೆಟಿಗರು ಸೆಪ್ಟೆಂಬರ್‌ 17ರಂದು ಯುಎಇ ತಲುಪುವ ನಿರೀಕ್ಷೆಯಿದೆ.

‘ಆರೋಗ್ಯದ ಸ್ಥಿತಿಗತಿ ಪರಿಶೀಲಿಸಿಕೊಳ್ಳಲುಸಿಎಸ್‌ಕೆ ಆಟಗಾರರಿಗೆ ಕೊರಳಲ್ಲಿ ಧರಿಸುವ ಸ್ಮಾರ್ಟ್‌ ಸಾಧನವೊಂದನ್ನುನೀದ್ದೇವೆ‘ ಎಂದೂ ಸಿಮನ್ಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.