
ಡೇಮಿಯನ್ ಮಾರ್ಟಿನ್
ಬ್ರಿಸ್ಬೇನ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
ಮಾರ್ಟಿನ್ ಅವರು ಮೆದುಳಿನ ಉರಿಯೂತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಸ್ವಸ್ಥರಾದ ಕಾರಣ ಅವರನ್ನು ಡಿ. 26ರಂದು ಗೋಲ್ಡ್‌ಕೋಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿದುಳು ಮತ್ತು ಬೆನ್ನುಹುರಿಯ ಸುತ್ತ ಪೊರೆಯ ಉರಿಯೂತವಾಗಿದೆ. ‘ಅವರಿಗೆ ಅತ್ಯುತ್ತಮವಾದ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮತ್ತೊಬ್ಬ ಹಿರಿಯ ಕ್ರಿಕೆಟಿಗ ಹಾಗೂ ಮಾರ್ಟಿನ್ ಸ್ನೇಹಿತ ಆ್ಯಡಂ ಗಿಲ್‌ಕ್ರಿಸ್ಟ್ ಅವರು ‘ದಿ ಆಸ್ಟ್ರೇಲಿಯನ್’ ಪತ್ರಿಕೆಗೆ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಡ್ಯಾರೆನ್ ಲೀಮನ್ ಸೇರಿ ಹಲವರು ಅವರ ಚೇತರಿಕೆ ಹಾರೈಸಿ ಜಾಲತಾಣದಲ್ಲಿ ಸಂದೇಶ ಹಾಕಿದ್ದಾರೆ.
ಅತ್ಯುತ್ತಮ ಸ್ಟ್ರೋಕ್‌ಮೇಕರ್‌ಗಳಲ್ಲಿ ಒಬ್ಬರಾದ ಮಾರ್ಟಿನ್ ಅವರು ಸ್ಟೀವ್ ವಾ ನೇತೃತ್ವದ ಪ್ರಬಲ ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟರ್ ಆಗಿದ್ದರು. ಟೆಸ್ಟ್‌ಗಳಲ್ಲಿ 46.37ರ ಸರಾಸರಿಯಲ್ಲಿ 4,406 ರನ್ ಗಳಿಸಿದ್ದರು. ಇದರಲ್ಲಿ 13 ಶತಕಗಳು ಒಳಗೊಂಡಿವೆ.
208 ಏಕದಿನ ಪಂದ್ಯಗಳಲ್ಲಿ 5346 ರನ್ ಗಳಿಸಿದ್ದು 40.8ರ ಸರಾಸರಿ ಹೊಂದಿದ್ದರು. 2006ರಲ್ಲಿ ನಿವೃತ್ತರಾದ ನಂತರ ಕೆಲಕಾಲ ವೀಕ್ಷಕ ವಿವರಣೆಗಾರರಾಗಿದ್ದರು.
2023ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲೂ ಆಡಿದ್ದರು. ಫೈನಲ್‌ನಲ್ಲಿ ಭಾರತ ವಿರುದ್ಧ ಅಜೇಯ 88 ರನ್ ಗಳಿಸಿದ್ದು, ರಿಕಿ ಪಾಂಟಿಂಗ್ ಜೊತೆ ನಿರ್ಣಾಯಕ ಜೊತೆಯಾಟದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.