ADVERTISEMENT

ನೆಟ್ಸ್‌ನಲ್ಲಿ ಸ್ಟೀವ್ ಸ್ಮಿತ್ ತಲೆಗೆ ಬಡಿದ ಚೆಂಡು: ವಿಶ್ರಾಂತಿ

ಏಜೆನ್ಸೀಸ್
Published 11 ಸೆಪ್ಟೆಂಬರ್ 2020, 13:37 IST
Last Updated 11 ಸೆಪ್ಟೆಂಬರ್ 2020, 13:37 IST
ಸ್ಟೀವನ್ ಸ್ಮಿತ್
ಸ್ಟೀವನ್ ಸ್ಮಿತ್   

ಮ್ಯಾಂಚೆಸ್ಟರ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರು ಗುರುವಾರ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಚೆಂಡು ತಲೆಗೆ ಬಡಿದಿದ್ದರಿಂದ ವಿಶ್ರಾಂತಿಗೆ ತೆರಳಿದರು.

ಅದರಿಂದಾಗಿ ಅವರು ಶುಕ್ರವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ತರಬೇತಿ ಸಿಬ್ಬಂದಿಯು ಥ್ರೋಡೌನ್ ಬಳಸಿ ಚೆಂಡು ಎಸೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಮಿತ್ ಅವರನ್ನು ಕಂಕಷನ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸರಣಿಯ ಮುಂದಿನ ಪಂದ್ಯವು ಭಾನುವಾರ ನಡೆಯಲಿದ್ದು, ಅದರಲ್ಲಿ ಅವರು ಆಡಬಹುದು.

ಶುಕ್ರವಾರ ಸಂಜೆ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 2019ರ ವಿಶ್ವಕಪ್ ಟೂರ್ನಿಯ ನಂತರ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿರುವುದು ಈಗಲೇ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.