ADVERTISEMENT

ಆಸ್ಟ್ರೇಲಿಯಾ: ಜೂನ್ 6ರಂದು ಕ್ಲಬ್‌ ಕ್ರಿಕೆಟ್ ಆರಂಭ‌

ಪಿಟಿಐ
Published 17 ಮೇ 2020, 19:30 IST
Last Updated 17 ಮೇ 2020, 19:30 IST

ಮೆಲ್ಬರ್ನ್ : ಕೊರೊನಾ ಕಾಟದಿಂದಾಗಿ ಆಸ್ಟ್ರೇಲಿಯಾದಲ್ಲಿ ಸ್ಥಗಿತಗೊಂಡಿದ್ದ ಕ್ರಿಕೆಟ್ ಚಟುವಟಿಕೆಯನ್ನು ಪುನರಾರಂಭಗೊಳಿಸಲು ವೇದಿಕೆ ಸಿದ್ಧಗೊಂಡಿದ್ದು ಡಾರ್ವಿನ್ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಟೂರ್ನಿಯ ಪಂದ್ಯಗಳು ಜೂನ್ ಆರರಿಂದ ನಡೆಯಲಿವೆ.

ಟೂರ್ನಿ ಆರಂಭಕ್ಕೂ ಮೊದಲು ಡಾರ್ವಿನ್ ಕ್ರಿಕೆಟ್ ವ್ಯವಸ್ಥಾಪನಾ ಮಂಡಳಿಯು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಬೌಲರ್‌ಗಳು ಚೆಂಡಿಗೆ ಹೊಳಪು ನೀಡುವುದಕ್ಕಾಗಿ ಎಂಜಲು ತಾಗಿಸುವುದನ್ನು ನಿಷೇಧಿಸಲಾಗಿದೆ. ವ್ಯಾಕ್ಸ್ ಬಳಸಲು ಅಂಪೈರ್‌ಗಳೇ ವ್ಯವಸ್ಥೆ ಮಾಡಲಿದ್ದಾರೆ. ಸರ್ಕಾರದಿಂದ ಪಡೆದ ಪ್ರಮಾಣಪತ್ರವನ್ನು ಕ್ಲಬ್‌ಗಳು ಹೊಂದಿರಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ ಎಂದು ಕ್ರಿಕೆಟ್‌ಗೆ ಸಂಬಂಧಿಸಿದ ವೆಬ್‌ಸೈಟ್ ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT