ADVERTISEMENT

ವಿಶ್ವಕಪ್‌ ಕ್ರಿಕೆಟ್ 2019| ಆಸಿಸ್ ಎದುರು ಟಾಸ್ ಗೆದ್ದ ಪಾಕ್ ಬೌಲಿಂಗ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 9:37 IST
Last Updated 12 ಜೂನ್ 2019, 9:37 IST
ಟಾಸ್‌ಗೆ ಬಂದ ಉಭಯ ತಂಡದ ನಾಯಕರು
ಟಾಸ್‌ಗೆ ಬಂದ ಉಭಯ ತಂಡದ ನಾಯಕರು   

ಟಾಂಟನ್ (ಇಂಗ್ಲೆಂಡ್):ಟಾಂಟನ್‌ನಲ್ಲಿರುವ ಕೌಂಟಿ ಪಿಚ್‌ನಲ್ಲಿ ಆಸ್ಟ್ರೇಲಿಯಾ ತಂಡದೆದುರುನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಉಭಯ ತಂಡಗಳು ಟೂರ್ನಿಯಲ್ಲಿ ತಲಾ ಮೂರು ಪಂದ್ಯಗಳನ್ನು ಆಡಿವೆ. ಎರಡು ಗೆಲುವುಗಳೊಂದಿಗೆ ಆಜೇಯ ಓಟ ಮುಂದುವರಿಸುವ ತವಕದಲ್ಲಿದ್ದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಭಾರತ ವಿರುದ್ಧದ ತನ್ನ ಮೂರನೇ ಪಂದ್ಯದಲ್ಲಿ 36ರನ್‌ ಅಂತರದ ಸೋಲುಕಂಡಿತ್ತು. ಇತ್ತಸರ್ಫರಾಜ್‌ ಖಾನ್‌ ನೇತೃತ್ವದ ಪಾಕಿಸ್ತಾನ ತಂಡ ತಲಾ ಒಂದು ಜಯ ಹಾಗೂ ಸೋಲು ಕಂಡಿದೆ.ಶ್ರೀಲಂಕಾ ವಿರುದ್ಧದ ಮೂರನೇ ಪಂದ್ಯ ಮಳೆಗೆ ಆಹುತಿಯಾಗಿತ್ತು.

ಹೀಗಾಗಿಜಯದ ಓಟ ಮುಂದುವರಿಸುವ ತವಕಪಾಕ್‌ ಪಡೆಯದ್ದಾದರೆ, ಗೆಲುವಿನ ಹಳಿಗೆ ಮರಳುವ ಬಯಕೆ ಆಸಿಸ್‌ ಬಳಗದ್ದು.

ADVERTISEMENT

ತಂಡಗಳು
ಆಸ್ಟ್ರೇಲಿಯಾ:ಡೇವಿಡ್ ವಾರ್ನರ್,ಆ್ಯರನ್ ಫಿಂಚ್ (ನಾಯಕ), ಶಾನ್ ಮಾರ್ಷ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್, ನೇಥನ್ ಕಾಲ್ಟರ್‌ನೇಲ್, ಗ್ಲೆನ್ ಮ್ಯಾಕ್ಸ್‌ವೆಲ್,ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್), ಪ್ಯಾಟ್ ಕಮಿನ್ಸ್‌,ಮಿಷೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್.

ಪಾಕಿಸ್ತಾನ:ಸರ್ಫರಾಜ್ ಅಹಮದ್ (ನಾಯಕ/ವಿಕೆಟ್‌ಕೀಪರ್), ಶಾಹೀನ್‌ ಆಫ್ರಿದಿ, ಅಸಿಫ್ ಅಲಿ, ಮೊಹಮ್ಮದ್ ಅಮಿರ್, ಬಾಬರ್ ಅಜಂ, ಮೊಹಮ್ಮದ್ ಹಫೀಜ್, ಇಮಾಮ್ ಉಲ್ ಹಕ್, ಹಸನ್‌ ಅಲಿ, ಶೋಯಬ್ ಮಲಿಕ್, ವಹಾಬ್ ರಿಯಾಜ್, ಫಕ್ರ್‌ ಜಮಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.