ADVERTISEMENT

Aus Vs SA | ಬ್ಯಾಟರ್‌ಗಳ ಅಬ್ಬರ: ದಶಕದ ನಂತರ 400 ರನ್‌ ಗಡಿ ದಾಟಿದ ಆಸೀಸ್‌

ಏಜೆನ್ಸೀಸ್
Published 24 ಆಗಸ್ಟ್ 2025, 9:37 IST
Last Updated 24 ಆಗಸ್ಟ್ 2025, 9:37 IST
   

ಮ್ಯಾಕೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾ ತಂಡವು 50 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 431 ರನ್‌ ಗಳಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಹೆಡ್‌, ಮಾರ್ಷ್‌ ಹಾಗೂ ಗ್ರೀನ್‌ ಅವರ ಶತಕದ ನೆರವಿನಿಂದ 400 ರನ್‌ ಗಡಿ ದಾಟಿದೆ.

ಆಸ್ಟ್ರೇಲಿಯಾ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾನುವಾರ 276 ರನ್‌ಗಳಿಂದ ಸದೆಬಡಿಯಿತು.

ADVERTISEMENT

ಆರಂಭಿಕ ಆಟಗಾರ ಟ್ರಾವಿಸ್‌ ಹೆಡ್‌ ಅವರು 103 ಎಸೆತಗಳಲ್ಲಿ 142 ರನ್‌ ಗಳಿಸಿದರು. ಇದರಲ್ಲಿ 17 ಬೌಂಡರಿ ಹಾಗೂ 5 ಸಿಕ್ಸರ್‌ ಸೇರಿವೆ. ಹೆಡ್‌ ಜೊತೆಗೂಡಿದ ನಾಯಕ ಮಾರ್ಷ್ 100 ರನ್‌(106 ಎಸೆತ) ಗಳಿಸಿದರು. ಮೊದಲ ವಿಕೆಟ್‌ಗೆ 250 ರನ್‌ ಜೊತೆಯಾಟ ಕಟ್ಟಿದರು.

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ಗ್ರೀನ್‌, ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ವೇಗದ ಶತಕ ಬಾರಿಸಿದರು. ಕೇವಲ 47 ಎಸೆತಗಳಲ್ಲಿ ಶತಕ ಸಿಡಿಸಿದರು. ಔಟಾಗದೆ 118 ರನ್‌ ಗಳಿಸಿದರು. ಕೊನೆಯಲ್ಲಿ ಅಲೆಕ್ಸ್‌ ಕ್ಯಾರಿ ಅಜೇಯ 50 ರನ್‌ ಗಳಿಸುವ ಮೂಲಕ ತಂಡದ ಮೊತ್ತ 400 ದಾಟಲು ಕಾರಣವಾದರು.

ಆಸ್ಟ್ರೇಲಿಯಾ ತಂಡವು ದಶಕದ ನಂತರ 400 ರನ್‌ ಗಡಿ ದಾಟಿತು. ಇದುವರೆಗೂ ಮೂರು ಬಾರಿ ಈ ಸಾಧನೆ ಮಾಡಿದ್ದು, ಕೊನೆಯ ಬಾರಿ 2015ರಲ್ಲಿ ಅಫ್ಗಾನಿಸ್ತಾನ ವಿರುದ್ಧ 417 ರನ್‌ ಗಳಿಸಿತ್ತು.

ಇದು ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಎರಡನೇ ಅತ್ಯಧಿಕ ಮೊತ್ತವಾಗಿದೆ. 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 434 ರನ್‌ ಗಳಿಸಿತ್ತು.

ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ಸರಣಿ ಗೆಲುವಿನ ಅಂತರ 2–1ಕ್ಕೆ ಇಳಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.