
ಪ್ರಜಾವಾಣಿ ವಾರ್ತೆ
ದುಬೈ: ಶ್ರೀಲಂಕಾ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಔಟ್ ಆದ ವೇಳೆ ಹತಾಶೆಯಿಂದ ಬ್ಯಾಟಿನಿಂದ ಸ್ಟಂಪ್ಸ್‌ಗೆ ಹೊಡೆದ ಕಾರಣ ಪಾಕಿಸ್ತಾನದ ಬ್ಯಾಟಿಂಗ್ ತಾರೆ ಬಾಬರ್ ಆಜಂ ಅವರಿಗೆ ಪಂದ್ಯ ಸಂಭಾವನೆಯ ಶೇ 10ರಷ್ಟು ದಂಡ ವಿಧಿಸಲಾಗಿದೆ. ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.
ಭಾನುವಾರ ನಡೆದ ಅಂತಿಮ ಏಕದಿನ ಪಂದ್ಯದ 21ನೇ ಓವರಿನಲ್ಲಿ ವಿಕೆಟ್ ಕಳೆದುಕೊಂಡ ಬಳಿಕ ಅವರು ಹೀಗೆ ಮಾಡಿದ್ದರು. ಆನ್‌ಫೀಲ್ಡ್ ಅಂಪೈರ್‌ಗಳಾದ ಅಲೆಕ್ಸ್ ವಾರ್ಫ್ ಮತ್ತು ರಶೀದ್ ರಿಯಾಝ್, ಮೂರನೇ ಅಂಪೈರ್ ಮತ್ತು ನಾಲ್ಕನೇ ಅಂಪೈರ್ ಅವರು ರೆಫ್ರಿಗೆ ವರದಿ ನೀಡಿದ್ದರು.
ಪಾಕಿಸ್ತಾನ ಸರಣಿಯನ್ನು 3–0 ಯಿಂದ ಗೆದ್ದುಕೋಂಡಿತ್ತು. ಬಾಬರ್ ಸರಣಿಯಲ್ಲಿ ಅತ್ಯಧಿಕ 165 ರನ್ ಗಳಿಸಿದ್ದರು. ಇದರಲ್ಲಿ 20ನೇ ಏಕದಿನ ಶತಕ ಸಹ ಒಳಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.