ADVERTISEMENT

ಬಾಂಗ್ಲಾ ಕ್ರಿಕೆಟಿಗನಿಗೆ ದಂಡ

ಪಿಟಿಐ
Published 28 ನವೆಂಬರ್ 2019, 19:03 IST
Last Updated 28 ನವೆಂಬರ್ 2019, 19:03 IST

ಕೋಲ್ಕತ್ತ: ವೀಸಾ ಅವಧಿ ಮುಗಿದರೂ ಉಳಿದುಕೊಂಡಿದ್ದ ಕಾರಣ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಆರಂಭ ಆಟಗಾರ ಸೈಫ್‌ ಹಸನ್‌ ಅವರನ್ನು ಬುಧವಾರ ಸಂಜೆ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಕೆಲಕಾಲ ತಡೆಹಿಡಿಯಲಾಗಿತ್ತು. ಅವರು ತವರಿಗೆ ಮರಳುವ ಮೊದಲು ₹ 21,600 ಮೊತ್ತವನ್ನು ದಂಡವಾಗಿ ತೆರಬೇಕಾಯಿತು.

ಟೆಸ್ಟ್‌ ಸರಣಿಗೆ ಬ್ಯಾಕ್‌ಅಪ್‌ ಆರಂಭ ಆಟಗಾರನಾಗಿ ಅವರು ತಮ್ಮ ತಂಡದ ಜೊತೆ ಭಾರತಕ್ಕೆ ಬಂದಿದ್ದರು. ಬೆರಳಿನ ಗಾಯದ ಕಾರಣ ಅವರು ಆಡಿರಲಿಲ್ಲ. ತಮ್ಮ ವೀಸಾ ಮುಗಿದು ಎರಡು ದಿನಗಳಾಗಿರುವುದನ್ನು ಗಮನಿಸದ ಅವರು ತಂಡದ ಜೊತೆ ಹಿಂತಿರುಗಿದ್ದರು. ವೀಸಾ ಅವಧಿ ಮುಗಿದರೂ ಉಳಿದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನರ್‌ ತೌಫೀಖ್‌ ಹಸನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT