
ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್
ಬೆಂಗಳೂರು: ಹಿಮಾಚಲ ಪ್ರದೇಶ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 182 ರನ್‌ಗಳಿಗೆ ಆಲೌಟ್ ಮಾಡಿದ ಕರ್ನಾಟಕ ತಂಡವು, ಕೂಚ್ ಬಿಹಾರ್ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಗೆಲುವಿನತ್ತ ಮುನ್ನಡೆದಿದೆ. ರಾಜ್ಯ ತಂಡವು ಅಂತಿಮ ದಿನವಾದ ಬುಧವಾರ ಗೆಲುವಿಗೆ 50 ರನ್ ಗಳಿಸಬೇಕಿದ್ದು, 8 ವಿಕೆಟ್‌ಗಳು ಬತ್ತಳಿಕೆಯಲ್ಲಿವೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ 27 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದ್ದ ಪ್ರವಾಸಿ ತಂಡವು, ಮಂಗಳವಾರ 78 ಓವರ್‌ಗಳಲ್ಲಿ 182 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಎಡಗೈ ಸ್ಪಿನ್ನರ್ ರತನ್ ಬಿ.ಆರ್. (43ಕ್ಕೆ4) ಪರಿಣಾಮಕಾರಿ ಎನಿಸಿದರು.
ಗೆಲುವಿಗೆ 148 ರನ್ ಗುರಿ ಪಡೆದ ರಾಜ್ಯ ತಂಡವು 30 ಓವರ್‌ಗಳಲ್ಲಿ 3 ವಿಕೆಟ್‌ಗೆ 98 ರನ್ ಗಳಿಸಿದೆ. ಸಿದ್ಧಾರ್ಥ್ ಅಖಿಲ್ (ಔಟಾಗದೇ 12) ಹಾಗೂ ನಾಯಕ ಮಣಿಕಂಠ ಶಿವಾನಂದ (ಔಟಾಗದೇ 4) ಕ್ರೀಸ್‌ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರು: ಹಿಮಾಚಲ ಪ್ರದೇಶ: 162 ಮತ್ತು 78 ಓವರ್‌ಗಳಲ್ಲಿ 182 (ನೌನಿಹಾಲ್ ಆರ್. 41; ರತನ್ ಬಿ.ಆರ್. 43ಕ್ಕೆ4, ಈಶಾ ಪುತ್ತಿಗೆ 52ಕ್ಕೆ2); ಕರ್ನಾಟಕ: 197 ಮತ್ತು 30 ಓವರ್‌ಗಳಲ್ಲಿ 3 ವಿಕೆಟ್‌ಗೆ 98 (ಆದೇಶ್ ಡಿ. ಅರಸ್ 40, ಧ್ರುವ್ ಕೃಷ್ಣನ್ 26; ಲಕ್ಷ್ಯ ಠಾಕೂರ್ 41ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.