
ಇಂದರ್‌ಜಿತ್ ಸಿಂಗ್ ಬಿಂದ್ರಾ
ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಇಂದರ್‌ಜಿತ್ ಸಿಂಗ್ ಬಿಂದ್ರಾ (84) ಭಾನುವಾರ ಇಲ್ಲಿ ನಿಧನರಾದರು. ಅವರಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ.
ಬಿಂದ್ರಾ ಅವರು 1993ರಿಂದ 1996 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1978ರಿಂದ 2014 ರವರೆಗೆ ಪಂಜಾಬ್ ಕ್ರಿಕೆಟ್ ಸಂಸ್ಥೆಯ (ಪಿಸಿಐ) ಚುಕ್ಕಾಣಿ ಹಿಡಿದಿದ್ದರು. ಕ್ರಿಕೆಟ್ ಮಾರ್ಕೆಟಿಂಗ್‌ನ ಹೊಸ ಯುಗಕ್ಕೆ ನಾಂದಿ ಹಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಶರದ್ ಪವಾರ್ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿದ್ದಾಗ ಬಿಂದ್ರಾ ಅವರು ಪ್ರಧಾನ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ಕ್ರೀಡಾ ಆಡಳಿತಕ್ಕೆ ಬಿಂದ್ರಾ ನೀಡಿರುವ ಅಪೂರ್ವ ಕೊಡುಗೆಗಾಗಿ 2015ರಲ್ಲಿ ಪಿಸಿಎ ಕ್ರೀಡಾಂಗಣವನ್ನು ‘ಐಎಸ್ ಬಿಂದ್ರಾ ಕ್ರೀಡಾಂಗಣ’ ಎಂದು ಮರುನಾಮಕರಣ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.