
ನವದೆಹಲಿ: ಏಕದಿನ ಮಹಿಳಾ ಕ್ರಿಕೆಟ್ ವಿಶ್ವಕಪ್ ಜಯಿಸಿದ ಸಂಭ್ರಮದಲ್ಲಿರುವ ಆಟಗಾರ್ತಿಯರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಖುಷಿಯ ಸುದ್ದಿಯನ್ನು ನೀಡಿದೆ.
ಮಹಿಳೆಯರ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರ್ತಿಯರು ಮತ್ತು ಅಧಿಕಾರಿಗಳ ಪಂದ್ಯದ ಸಂಭಾವನೆಯನ್ನು ದುಪ್ಪಟ್ಟು ಮಾಡಿದೆ. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಇದಕ್ಕೆ ಅನುಮೋದನೆ ನೀಡಿದೆ.
ಪರಿಷ್ಕೃತ ನಿಯಮದ ಪ್ರಕಾರ; ದೇಶಿ ಟೂರ್ನಿಗಳಲ್ಲಿ ಆಡುವ ಆಟಗಾರ್ತಿಯರು ಇನ್ನು ಮುಂದೆ ಪಂದ್ಯದ ಸಂದರ್ಭದಲ್ಲಿ ದಿನವೊಂದಕ್ಕೆ ₹50 ಸಾವಿರ ಪಡೆಯಲಿದ್ದಾರೆ. ಈ ಮೊದಲು ₹ 20 ಸಾವಿರ ಇತ್ತು. ಮೀಸಲು ಆಟಗಾರ್ತಿಯರು ದಿನಕ್ಕೆ ₹ 10 ಸಾವಿರ ಗಳಿಸುವರು.
ಸೀನಿಯರ್ ಮಹಿಳಾ ಏಕದಿನ ಟೂರ್ನಿಗಳು ಮತ್ತು ಬಹುದಿನಗಳ ಪಂದ್ಯಗಳಲ್ಲಿ 11ರ ಬಳಗದಲ್ಲಿ ಆಡುವ ಆಟಗಾರ್ತಿಯರು ದಿನವೊಂದಕ್ಕೆ ₹ 50 ಸಾವಿರ ಪಡೆಯುವರು. ಕಾಯ್ದಿಟ್ಟ ಆಟಗಾರ್ತಿಯರು ₹ 25 ಸಾವಿರ ಗಳಿಸುವರು.
ರಾಷ್ಟ್ರೀಯ ಟಿ20 ಟೂರ್ನಿಗಳ ಪಂದ್ಯದಲ್ಲಿ ಕಣಕ್ಕಿಳಿಯುವ 11ರ ಬಳಗದಲ್ಲಿರುವವರು ₹ 25 ಸಾವಿರ ಮತ್ತು ಮೀಸಲು ಆಟಗಾರ್ತಿಯರು ₹ 12,500 ಪಡೆಯುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.