
ಐಪಿಎಲ್ ಲೋಗೊ
ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು, 2026ರ ಐಪಿಎಲ್‌ಗೆ ಪೂರ್ವಭಾವಿಯಾಗಿ ಗೂಗಲ್‌ನ ಕೃತಕ ಬುದ್ಧಿಮತ್ತೆ ಕಂಪನಿಯಾದ ಜೆಮಿನಿ ಜೊತೆ ₹270 ಕೋಟಿ ಮೊತ್ತದ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿದೆ.
‘ಈ ಒಪ್ಪಂದ ಮೂವರು ವರ್ಷಗಳ ಅವಧಿಯದ್ದಾಗಿದ್ದು, ಐಪಿಎಲ್ ಜಾಗತಿಕ ವರ್ಚಸ್ಸನ್ನು ಪುನಃ ಜಾಹೀರುಪಡಿಸಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.
ಜೆಮಿನಿ ಪ್ರತಿಸ್ಪರ್ಧಿಯಾಗಿರುವ ಚಾಟ್‌ಜಿಪಿಟಿ, ಹಾಲಿ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಪ್ರಾಯೋಜಕರುಗಳಲ್ಲಿ ಒಂದಾಗಿದೆ. 2025ರ ನವೆಂಬರ್‌ನಲ್ಲಿ ಈ ಒಪ್ಪಂದ ನಡೆದಿತ್ತು.
ಗೇಮಿಂಗ್ ವೇದಿಕೆಯಾದ ‘ಡ್ರೀಮ್ 11’ ಅನ್ನು ಕೇಂದ್ರ ಸರ್ಕಾರ 2025ರಲ್ಲಿ ನಿಷೇಧಿಸಿದ ಬಳಿಕ ಬಿಸಿಸಿಐ, ಅಪೋಲೊ ಟೈರ್ಸ್ ಜೊತೆ ₹579 ಕೋಟಿ ಮೊತ್ತಕ್ಕೆ ಪ್ರಧಾನ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿತ್ತು.
ವಿಶ್ವದ ಅತಿ ದೊಡ್ಡ ಟಿ20 ಲೀಗ್ ಆಗಿರುವ ಐಪಿಎಲ್‌ಗೆ ಟಾಟಾ ಸಮೂಹವು ಪ್ರಧಾನ ಪ್ರಾಯೋಜತ್ವ (ಜೆರ್ಸಿ ಸ್ಪಾನ್ಸರ್‌ಷಿಪ್) ಹೊಂದಿದೆ.
ಜೆಮಿನಿ ಈಗ ಐಪಿಎಲ್‌ನ ಪ್ರಾಯೋಜರಲ್ಲಿ ಒಬ್ಬರಾಗಿರುವುದು ವಹಿಸಿಕೊಂಡಿರುವುದು, ಭಾರತೀಯ ಕ್ರಿಕೆಟ್‌ನಲ್ಲಿ ಎಐ ಕಂಪನಿಗಳು ತೋರುತ್ತಿರುವ ಆಸಕ್ತಿಯನ್ನು ಸೂಚಿಸುತ್ತಿದೆ.
ಐಪಿಎಲ್ ಮಾರ್ಚ್ 26ರಿಂದ ಮೇ 31ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.