ADVERTISEMENT

ವಿನೂ ಮಂಕಡ್ ಟ್ರೋಫಿ | ನಿತೀಶ್‌ ಮಿಂಚು: ಕರ್ನಾಟಕಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 19:25 IST
Last Updated 17 ಅಕ್ಟೋಬರ್ 2025, 19:25 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಡೆಹ್ರಾಡೂನ್: ನಿತೀಶ್ ಆರ್ಯ ಅರ್ಧಶತಕ ಮತ್ತು ಕುಲದೀಪ್ ಸಿಂಗ್ ಪುರೋಹಿತ್ ಅವರ ಅಮೋಘ ಬೌಲಿಂಗ್ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತಂಡವು ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಛತ್ತೀಸಗಡ ಕ್ರಿಕೆಟ್ ಸಂಸ್ಥೆ ಎದುರು 15 ರನ್‌ಗಳಿಂದ ಜಯಿಸಿತು. 

ADVERTISEMENT

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕದ ತಂಡವು ನಿತೀಶ್ (59 ರನ್) ಹಾಗೂ ರಿಹಾನ್ ಮೊಹಮ್ಮದ್ (42 ರನ್) ಅವರ ಬ್ಯಾಟಿಂಗ್‌ನಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 246 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಛತ್ತೀಸಗಢ ತಂಡಕ್ಕೆ 49.3 ಓವರ್‌ಗಳಲ್ಲಿ 231 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 50 ಓವರ್‌ಗಳಲ್ಲಿ 7ಕ್ಕೆ246 (ಎಲ್. ನಿತೀಶ್ ಆರ್ಯ 59, ರಿಹಾನ್ ಮೊಹಮ್ಮದ್ 42, ಧನಂಜಯ್ ನಾಯಕ 25ಕ್ಕೆ2, ಆದಿತ್ಯ ಅಗರವಾಲ್ 46ಕ್ಕೆ2) ಛತ್ತೀಸಗಢ: 49.3 ಓವರ್‌ಗಳಲ್ಲಿ 231 (ಬಿ. ಬಾಲಾಜಿರಾವ್ 61, ಯಶ್ ಕುಮಾರ್ ವರ್ದಾ 46, ಕೃಷ್ಣ ಟಾಂಕ್ 47, ಸಿದ್ಧಾರ್ಥ್ ಅಖಿಲ್ 31ಕ್ಕೆ2, ಮಣಿಕಾಂತ ಶಿವಾನಂದ 49ಕ್ಕೆ2, ಕುಲದೀಪ್ ಸಿಂಗ್ ಪುರೋಹಿತ್ 35ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.