
ಲಂಡನ್: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರಿಗೆ ಮುಖಕ್ಕೆ ಚೆಂಡು ಅಪ್ಪಳಿಸಿ ಗಂಭೀರ ಗಾಯವಾಗಿದೆ.
34 ವರ್ಷದ ಆಲ್‌ರೌಂಡರ್ ಸ್ಟೋಕ್ಸ್ ಅವರು ತಮ್ಮ ಬಲಗಣ್ಣಿಗೆ ಚೆಂಡಿನ ಪೆಟ್ಟಿನಿಂದ ಆಗಿರುವ ಗಾಯವಾಗಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬಲಗಣ್ಣು ಮತ್ತು ಸುತ್ತಮುತ್ತಲು ಉರಿಯೂತವಾಗಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲದೇ ಅವರ ಗಲ್ಲ ಮತ್ತು ತುಟಿಗೂ ತೀವ್ರ ಪೆಟ್ಟಾಗಿದ್ದು, ಮೂಗಿಗೆ ಬ್ಯಾಂಡೇಜ್ ಹಾಕಲಾಗಿದೆ.
ನೆಟ್ಸ್ ಅಭ್ಯಾಸದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅವರು ನೆಟ್ಸ್ ಹೊರಗೆ ಸಹ ಆಟಗಾರರೊಂದಿಗೆ ಮಾತನಾಡುತ್ತಿದ್ದರು. ನೆಟ್ಸ್‌ನಲ್ಲಿ ಆಡುತ್ತಿದ್ದ ಬ್ಯಾಟರ್ ಹೊಡೆದ ಚೆಂಡು ಬಂದು ಸ್ಟೋಕ್ಸ್‌ಗೆ ಬಡಿದಿದೆ ಎಂದು ವರದಿಯಾಗಿದೆ.
ಈಚೆಗೆ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ಸೋತಿತ್ತು. ಅದರಿಂದಾಗಿ ಸ್ಟೋಕ್ಸ್ ನಾಯಕತ್ವದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಅವರು ಈಗಾಗಲೇ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದ್ದರಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.