ADVERTISEMENT

ಮತ್ತೊಂದು ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

ಐಎಸ್‌ಎಲ್: ಹೈದರಾಬಾದ್ ಎಫ್‌ಸಿ ಎದುರು ಗೋಲಿಲ್ಲದ ಡ್ರಾ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 16:46 IST
Last Updated 28 ನವೆಂಬರ್ 2020, 16:46 IST
ಗೋವಾದಲ್ಲಿ ಶನಿವಾರ ನಡೆದ ಐಎಸ್‌ಎಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳ ನಡುವಣ ಹಣಾಹಣಿ   –ಪಿಟಿಐ ಚಿತ್ರ
ಗೋವಾದಲ್ಲಿ ಶನಿವಾರ ನಡೆದ ಐಎಸ್‌ಎಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳ ನಡುವಣ ಹಣಾಹಣಿ   –ಪಿಟಿಐ ಚಿತ್ರ   

ಫತೋರ್ಡಾ(ಗೋವಾ): ಸುನೀಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಎರಡನೇ ಪಂದ್ಯದಲ್ಲಿಯೂ ಡ್ರಾ ಕ್ಕೆ ಸಮಾಧಾನಪಡಬೇಕಾಯಿತು.

ಫತೋರ್ಡಾದಲ್ಲಿ ಶನಿವಾರ ತುರುಸಿನ ಹೋರಾಟ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಒಂದೂ ಗೋಲು ಗಳಿಸಲಿಲ್ಲ.

ಟೂರ್ನಿಯ ಮೊದಲ ಪಂದ್ಯದಲ್ಲಿ ಬಿಎಫ್‌ಸಿ ತಮಡವು ಗೋವಾದ ಎದುರು 2–2ರ ಸಮಬಲ ಫಲಿತಾಂಶ ಪಡೆದಿತ್ತು. ಹೈದರಾಬಾದ್ ತಂಡವು ತನ್ನ ಮೊದಲ ಪಂದ್ಯದಲ್ಲಿ 1–0ಯಿಂದ ಒಡಿಶಾ ವಿರುದ್ಧ ಜಯಿಸಿತ್ತು.

ADVERTISEMENT

ಬಿಎಫ್‌ಸಿ ಒಟ್ಟು ಎರಡು ಪಾಯಿಂಟ್ಸ್‌ನೊಂದಿಗೆ ಆರನೇ ಹಾಗೂ ಹೈದರಾಬಾದ್ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿವೆ.

ಚೆಟ್ರಿ ಬಳಗದ ಗೋಲು ಗಳಿಕೆಯ ಎಲ್ಲ ಪ್ರಯತ್ನಗಳಿಗೂ ಎದುರಾಳಿ ತಂಡದ ರಕ್ಷಣಾ ಪಡೆಯು ತಡೆಯೊಡ್ಡಿತು. ಇತ್ತ ಬಿಎಫ್‌ಸಿಯ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ತಮ್ಮ ಚುರುಕಾದ ಆಟದ ಮೂಲಕ ಹೈದರಾಬಾದ್ ಪ್ರಯತ್ನಗಳಿಗೆ ಅಡ್ಡಗೋಡೆಯಾದರು.

ಆದರೆ, ನಿಖರವಾದ ಪಾಸ್‌ಗಳನ್ನು ಮಾಡುವಲ್ಲಿ ಹೈದರಾಬಾದ್ ಬಿಎಫ್‌ಸಿಗಿಂತ ಮುಂದಿತ್ತು. ಬೆಂಗಳೂರಿನ ಇಬ್ಬರು ಆಟಗಾರರು ಒರಟು ಆಟಕ್ಕೆ ರೆಫರಿಯಿಂದ ಹಳದಿ ಕಾರ್ಡ್ ದರ್ಶನ ಕೂಡ ಪಡೆದರು. ಬಿಎಫ್‌ಸಿ ತನಗೆ ಲಭಿಸಿದ ಎರಡು ಮತ್ತು ಹೈದರಾಬಾದ್‌ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳನ್ನಾಗಿ ಪರಿವರ್ತಿಸುವಲ್ಲಿ ವಿಫಲವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.