
ನವದೆಹಲಿ: ಭೂತಾನ್ ತಂಡದ ಸ್ಪಿನ್ ಬೌಲರ್ ಸೋನಮ್ ಯೆಶೆ ಅವರು ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ 8 ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ.
ಮ್ಯಾನ್ಮಾರ್ ವಿರುದ್ಧದ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಸೋನಮ್ ಯೆಶೆ ಅವರು ಈ ಸಾಧನೆ ಮಾಡಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭೂತಾನ್ ತಂಡ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತ್ತು.
128 ರನ್ ಗುರಿ ಬೆನ್ನತ್ತಿದ ಮ್ಯಾನ್ಮಾರ್ ತಂಡವನ್ನು 22 ವರ್ಷದ ಸೋನಮ್, ತಮ್ಮ ಸ್ಪಿನ್ ಜಾದುವಿನ ಮೂಲಕ ಕಟ್ಟಿಹಾಕಿದರು. 4 ಓವರ್‌ಗಳಲ್ಲಿ ಕೇವಲ 7 ರನ್ ಬಿಟ್ಟುಕೊಟ್ಟು 8 ವಿಕೆಟ್ ಪಡೆದರು.
ಮ್ಯಾನ್ಮಾರ್ ತಂಡವು 45 ರನ್ ಗಳಿಗೆ ಆಲೌಟ್ ಆಯಿತು.
ಇದುವರೆಗೂ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಯಾವುದೇ ಬೌಲರ್ ಕೂಡ 8 ವಿಕೆಟ್ ಪಡೆದಿರಲಿಲ್ಲ. 2023ರಲ್ಲಿ ಮಲೇಷ್ಯಾದ ವೇಗದ ಬೌಲರ್ ಸಯಾಜ್ರುಲ್ ಇದ್ರಸ್ ಅವರು ಚೀನಾದ ವಿರುದ್ಧ 8 ರನ್‌ಗೆ 7 ವಿಕೆಟ್ ಪಡೆದಿದ್ದು, ಈವರೆಗಿನ ದಾಖಲೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.