ಬೆಂಗಳೂರು: ಪ್ರಖರ್ ಚತುರ್ವೇದಿ (225;368ಎ, 4x31, 6x3) ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರೈಲ್ವೇಸ್ ತಂಡದ (ಆರ್‌ಎಸ್‌ಪಿಬಿ) ವಿರುದ್ಧ ಬೃಹತ್ ಮೊದಲ ಕಲೆಹಾಕಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 135.4 ಓವರ್‌ಗಳಲ್ಲಿ 7 ವಿಕೆಟ್‌ಗೆ 529 ರನ್ ಗಳಿಸಿ ಡಿಕ್ಲೇರ್ಡ್ ಮಾಡಿದೆ. ಇ.ಜೆ. ಜಸ್ಪರ್ ( 105;201ಎ) ಶತಕ ದಾಖಲಿಸಿದರೆ, ಕಾರ್ತಿಕೇಯ ಕೆ.ಪಿ. (56) ಮತ್ತು ಧ್ರುವ್ ಪ್ರಭಾಕರ್ (ಔಟಾಗದೇ 53) ಅರ್ಧಶತಕಗಳ ಕಾಣಿಕೆ ನೀಡಿದರು.
ಇದಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡವು 36 ಓವರ್‌ಗಳಲ್ಲಿ 3 ವಿಕೆಟ್‌ಗೆ 82 ರನ್ ಗಳಿಸಿದೆ. ಅಭಿಷೇಕ್ ಕೌಶಲ್ (ಔಟಾಗದೇ 27) ಮತ್ತು ಗರ್ವ್ ಸಾಂಗ್ವನ್ (ಔಟಾಗದೇ 41) ಮೂರನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಧನುಷ್ ಗೌಡ ಮೂರು ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ ತಂಡ: 135.4 ಓವರ್‌ಗಳಲ್ಲಿ 7 ವಿಕೆಟ್‌ಗೆ 529 ಡಿಕ್ಲೇರ್ಡ್ (ಇ.ಜೆ. ಜಸ್ಪರ್ 105, ಪ್ರಖರ್ ಚತುರ್ವೇದಿ 225, ಕಾರ್ತಿಕೇಯ ಕೆ.ಪಿ. 56, ಅನೀಶ್ವರ್ ಗೌತಮ್ 38, ಧ್ರುವ್ ಪ್ರಭಾಕರ್ ಔಟಾಗದೇ 53; ಎಸ್.ಕೆ. ಜಾನಿ ಬಾಷಾ 83ಕ್ಕೆ 3, ವಿರಾಟ್ ಜೈಸ್ವಾಲ್ 63ಕ್ಕೆ 2). ರೈಲ್ವೇಸ್ ತಂಡ: 36 ಓವರ್‌ಗಳಲ್ಲಿ 3 ವಿಕೆಟ್‌ಗೆ 82 (ಗರ್ವ್ ಸಾಂಗ್ವನ್ ಔಟಾಗದೇ 41; ಧನುಷ್ ಗೌಡ 17ಕ್ಕೆ 3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.